Asianet Suvarna News Asianet Suvarna News

ಬೆಂಗಳೂರು: ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನರಿಗಾಗಿ ಮಾನವೀಯ ಕೆಲಸ..!

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಚೇತನರಿಗಾಗಿಯೇ ಎರಡು ಮಳಿಗೆಗಳನ್ನ ನೀಡುವ ಮೂಲಕ ಪ್ರೋತ್ಸಾಹ ನೀಡಿದ ಅಧಿಕಾರಿಗಳು 

ಬೆಂಗಳೂರು(ಡಿ.06): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳು ವಿಶೇಷ ಚೇತನರಿಗಾಗಿಯೇ ಎರಡು ಮಳಿಗೆಗಳನ್ನ ನೀಡುವ ಮೂಲಕ ಪ್ರೋತ್ಸಾಹ ನೀಡಿದ್ದಾರೆ. ಮಿಟ್ಟಿ ಕೆಫೆಗೆ ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಚಾಲನೆ ನೀಡಲಾಗಿದೆ. ಈ ಕೆಫೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲರೂ ವಿಕಲಚೇತನರಾಗಿದ್ದಾರೆ. ರಾಜ್ಯದ ಮೂಲೆ ಮೂಲೆಗಳಿಂದ ಇರುವ ವಿಶೇಷ ಚೇತನರಿಗಾಗಿಯೇ ಈ ಕೆಫೆ ಸ್ಥಾಪನೆ ಮಾಡಲಾಗಿದೆ. ಕೆಂಪೇಗೌಡ ಏರ್ಪೋರ್ಟ್ ನರ್ಮಿನಲ್ ಬಳಿ ಮಿಟ್ಟೆ ಕೆಫೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಸ್ವಾವಲಂಬನೆ ಬದುಕಿಗೆ ದಾರಿ ಮಾಡಿ ಕೊಟ್ಟ ಅಧಿಕಾರಿಗಳಿಗೆ ವಿಕಲಚೇತನರು ಧನ್ಯವಾದ ತಿಳಿಸಿದ್ದಾರೆ. ವಿಶೇಷ ಚೇತನರಿಗೆ ಅನುಕೂಲವಾಗುವ  ನಿಟ್ಟಿನಲ್ಲಿಯೇ ಈ ವ್ಯವಸ್ಥೆ ಮಾಡಿದ್ದಾರೆ. 

ಯಡಿಯೂರಪ್ಪ ನಟನೆಯ ತನುಜಾ ಚಿತ್ರದ ಟ್ರೈಲರ್ ಲಾಂಚ್