Hubli Riots: ಸ್ಫೋಟಕ ಮಾಹಿತಿ ಬಾಯ್ಬಿಟ್ಟ ಬಂಧಿತ ವಸೀಮ್ ಪಠಾಣ್‌!

*ಹುಬ್ಬಳ್ಳಿ ಗಲಭೆಯ ಸ್ಫೋಟಕ ಸತ್ಯ ಬಯಲು 
*ಸ್ಫೋಟಕ ಮಾಹಿತಿ ಬಾಯ್ಬಿಟ್ಟ  ಬಂಧಿತ ವಸೀಮ್
*ಹನುಮಾನ್‌ ಜಯಂತಿಯಂದು ಗಲಬಭೆ ಪ್ಲಾನ್‌
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ (ಏ. 22): ಹಳೆ ಹುಬ್ಬಳ್ಳಿ ಗಲಭೆಯ (Hubballi Riots) ಸತ್ಯ ಬಯಲಾಗಿದ್ದು ಬಂಧಿತ ವಸೀಂ ಪಠಾಣ್‌ ಗಲಭೆ ಕುರಿತು ಸ್ಫೋಟಕ ಮಾಹಿತಿ ಬಾಯ್ಬಿಟ್ಟಿದ್ದಾನೆ. ರಾಮನವಮಿ ಮುಗಿದ 6 ದಿನ ಬಳಿಕೆ ಗಲಾಟೆ ಮಾಡಲು ವಸೀಂ ಪಠಾಣ್‌ ತಂಡ ಪ್ರೀ ಪ್ಲಾನ್‌ ಮಾಡಿಕೊಂಡಿತ್ತು. ಹಳೇ ಹುಬ್ಬಳ್ಳಿ ಠಾಣೆ ಮುಂದೆ ಜನರನ್ನು ಸೇರಿಸಿದ್ದ ವಸೀಂ ಹನುಮಾನ್‌ ಜಯಂತಿಯ ದಿನವೇ ಧರಣಿ ಹೆಸರಲ್ಲಿ ಗಲಭೆಗೆ ಸಂಚು ರೂಪಿಸಿದ್ದ. ರಾಮನವಮಿಯಂದು ಮಸೀದಿ ಮೇಲೆ ಹಿಂದೂಗಳು ಲೇಸರ್‌ ಲೈಟ್‌ ಬಿಟ್ಟಿದ್ದಾರೆ ಎಂದು ಸಿಟ್ಟಿಗೆದ್ದು ಗಲಭೆಗೆ ಪ್ಲಾನ್‌ ಮಾಡಿ ವಸೀಂ ಯುವಕರನ್ನು ಪ್ರಚೋದಿಸಿದ್ದ. 

ಇದನ್ನೂ ಓದಿ: Hubballi Riot: ಲಾರಿ ಚಾಲಕನಾಗಿದ್ದ ವಸೀಮ್ ಪಠಾಣ್‌ ಆಝಾನ್‌ ಉದ್ಘೋಷಕನಾಗಿದ್ಹೇಗೆ.?

ಹನುಮಾನ್‌ ಜಯಂತಿಯಂದು ದೊಡ್ಡ ಮಟ್ಟದ ಪ್ರತಿಭಟನೆಗೆ ಪ್ಲಾನ್‌ ಮಾಡಿದ್ದ ವಸೀಂ ಯುವಕರನ್ನು ಸೇರಿಸಲು ವಾಟ್ಸಾಪ್‌ ಗ್ರೂಪ್ಸ್‌ ಕ್ರಿಯೇಟ್‌ ಮಾಡಿದ್ದ. ಆದರೇ ಅದೇ ದಿನ ಅಭಿಷೇಕ್‌ ಹಿರೇಮಠ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ. ಬಳಿಕ ಪ್ಲಾನ್‌ ಚೇಂಜ್‌ ಮಾಡಿದ್ದ ವಸೀಂ ವಾಟ್ಸಾಪ್‌ ಪೋಸ್ಟ್‌ ನೆಪವಾಗಿಟ್ಟುಕೊಂಡು ಜನರನ್ನು ಸೇರಿಸಿದ್ದ. ದಾಳಿಗೂ ಮುನ್ನ ಯುವಕರ ಬ್ರೇನ್‌ ವಾಶ್‌ ಮಾಡಿ ಇಸ್ಲಾಂ ಧರ್ಮಕ್ಕೆ ಅನ್ಯಾಯವಾದರೆ ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದ

Related Video