ಕ್ರೈಸ್ತ ಧರ್ಮಕ್ಕೆ ಮತಾಂತರ ಆಗುವಂತೆ ಗಂಡನಿಗೆ ಪತ್ನಿಯ ಪಟ್ಟು: ಪೊಲೀಸ್ ಠಾಣೆಗೆ ಮುತ್ತಿಗೆ

ಹುಬ್ಬಳ್ಳಿಯಲ್ಲಿ‌ ಮತಾಂತರ ವಿವಾದ ಮುನ್ನೆಲೆಗೆ ಬಂದಿದ್ದು, ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗಿದೆ.
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ನ.16):ಶಿಕ್ಕಲಗಾರ ಸಮುದಾಯವನ್ನು ಟಾರ್ಗೆಟ್‌ ಮಾಡಿರುವ ಆರೋಪ ಕೇಳಿ ಬಂದಿದ್ದು, ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಗೆ ಶಿಕ್ಕಲಗಾರ ಹಿಂದೂ ಮುಖಂಡರು ಮುತ್ತಿಗೆ ಹಾಕಿದ್ದಾರೆ. ಕ್ರಿಶ್ಚಿಯನ್‌'ಗೆ ಮತಾಂತರವಾಗುವಂತೆ ಪತ್ನಿಯು, ಗಂಡನ ಬೆನ್ನು ಬಿದ್ದಿದ್ದಾಳೆ. ಮತಾಂತರ ಆಗದಿದ್ದರೆ ಸಂಸಾರ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದಾಳೆ. ಪತ್ನಿಯ ಕಾಟಕ್ಕೆ ಬೇಸತ್ತು ಸಮುದಾಯದ ನಾಯಕರ ಮೊರೆ ಹೋಗಿದ್ದಾರೆ ಪತಿ ಸಂಪತ್‌ ಬಗನಿ. ಮತಾಂತರ ವಿಚಾರವಾಗಿ ದಂಪತಿ ಹಲವು ಬಾರಿ ಠಾಣೆ ಮೆಟ್ಟಿಲೇರಿದ್ದರು. ಆದರೆ ಪ್ರತಿಬಾರಿಯು ಸಂಧಾನ ಮಾಡಿ ಕಳುಹಿಸಲಾಗುತ್ತಿತ್ತು. ರೌಡಿಶೀಟರ್‌ ಮದನ್‌ ಬುಗುಡಿ ಸೇರಿದಂತೆ 15 ಜನರ ವಿರುದ್ಧ ದೂರು ದಾಖಲಾಗಿದೆ.

ದಂಡಾವತಿ ಯೋಜನೆಗೆ ಮರುಚಾಲನೆ: ಸಿಎಂ ಬೊಮ್ಮಾಯಿ ಭರವಸೆ

Related Video