ದಂಡಾವತಿ ಯೋಜನೆಗೆ ಮರುಚಾಲನೆ: ಸಿಎಂ ಬೊಮ್ಮಾಯಿ ಭರವಸೆ

  • ದಂಡಾವತಿ ಯೋಜನೆಗೆ ಮರುಚಾಲನೆ: ಸಿಎಂ ಬೊಮ್ಮಾಯಿ ಭರವಸೆ
  • ಆನವಟ್ಟಿಯಲ್ಲಿ ಬಿಜೆಪಿ ಜನಸಂಕಲ್ಪ ಯಾತ್ರೆ ಸಮಾವೇಶ
  • ಸಣ್ಣಪುಟ್ಟಲೋಪ, ಗೊಂದಲ ಮರೆತು ಪಕ್ಷ ಕಟ್ಟಬೇಕು: ಬಿಎಸ್‌ವೈ
Revival of Dandavati project  CM Bommai promises shivamogga rav

ಸೊರಬ (ನ.16) : ನಿಂತುಹೋದ ದಂಡಾವತಿ ಯೋಜನೆಯನ್ನು ಜನರಿಗೆ ತೊಂದರೆ ಆಗದಂತೆ ಮರುಚಾಲನೆ ನೀಡಲು ಸದ್ಯದಲ್ಲಿಯೇ ಅಡಿಗಲ್ಲು ಹಾಕಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಭರವಸೆ ನೀಡಿದರು.

ತಾಲೂಕಿನ ಆನವಟ್ಟಿಯಲ್ಲಿ ಬಿಜೆಪಿ ವತಿಯಿಂದ ಮಂಗಳವಾರ ಹಮ್ಮಿಕೊಂಡ ಜನಸಂಕಲ್ಪ ಯಾತ್ರೆಯ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದೇವರಾಜ ಅರಸು ಅವರು ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದಲ್ಲದೆ, ಗೇಣಿದಾರರ ಪರ ಕಾನೂನು ರೂಪಿಸಿದರು. ಎಸ್‌.ಬಂಗಾರಪ್ಪ, ಯಡಿಯೂರಪ್ಪ ಅವರು ಕೂಡ ಅದೇ ದಾರಿಯಲ್ಲಿ ನಡೆದರು. ಎಸ್‌.ಬಂಗಾರಪ್ಪ ಯಾವುದೇ ಪಕ್ಷದವರಾಗಿ ಗುರುತಿಸಿಕೊಂಡಿರಲಿಲ್ಲ. ಪಕ್ಷಗಳೇ ಬಂಗಾರಪ್ಪ ಅವರನ್ನು ಅವಲಂಬಿಸಿದ್ದವು. ಹೀಗಾಗಿ ರಾಜ್ಯದಲ್ಲಿ ಬಂಗಾರಪ್ಪ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎಂದರು.

ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ ಸಿದ್ದರಾಮಯ್ಯ ಆಪ್ತ ರಾಜು ತಲ್ಲೂರು: ಬಿಜೆಪಿ ಸೇರಲು ನಿರ್ಧಾರ

ಯಡಿಯೂರಪ್ಪ ಅವರಿಂದ ಶಿವಮೊಗ್ಗ ಜಿಲ್ಲೆಯ ಚಿತ್ರಣ ಬದಲಾಗುವ ಜತೆಗೆ ಸಮಗ್ರ ಅಭಿವೃದ್ಧಿ ಕಂಡಿದೆ. ಇನ್ನೂ ಜನರ ಸೇವೆ ಮಾಡುವ ಇಂಗಿತವನ್ನು ಯಡಿಯೂರಪ್ಪ ಹೊಂದಿದ್ದು, ರಾಜ್ಯದ ಮೂಲೆ ಮೂಲೆಗೂ ಪ್ರವಾಸ ಮಾಡಿ ಪಕ್ಷ ಕಟ್ಟುತ್ತಿದ್ದಾರೆ. ಪೈಪೋಟಿಯಲ್ಲಿ ಕೆಲಸ ಮಾಡುವ ಶಾಸಕರನ್ನು ಯಡಿಯೂರಪ್ಪ ಅವರು ಜಿಲ್ಲೆಯಲ್ಲಿ ಹುಟ್ಟುಹಾಕಿದ್ದಾರೆ. ಈಗಾಗಲೇ ತಾಲೂಕಿನಲ್ಲಿ .800 ಕೋಟಿ ಅನುದಾನದಲ್ಲಿ ನಿರ್ಮಾಣವಾದ ಕಾಮಗಾರಿಗಳನ್ನು ಸದ್ಯದಲ್ಲಿ ಉದ್ಘಾಟಿಸಲಾಗುವುದು ಎಂದರು.

ಅಹಿಂದಾ ಎಂದು ಹೇಳುತ್ತ ಕಾಂಗ್ರೆಸ್‌ನವರು ಮುಂದೇ ಬಂದರೇ ಹೊರೆತು, ಅಹಿಂದಾ ಸ್ಥಿತಿ ಮಾತ್ರ ಅಲ್ಲೆ ಇದೆ. ಜಾತಿ, ಧರ್ಮ ಒಡೆದು ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ. ಅನ್ನಭಾಗ್ಯದ ಮೂಲಕ ಅನ್ನಕ್ಕೆ ಕನ್ನ ಹಾಕಿದ್ದಲ್ಲದæೕ, ಅನೇಕ ಯೋಜನೆಗಳಲ್ಲಿ ಭ್ರಷ್ಟಾಚಾರ ನಡೆಸಿದ್ದು ಬಹಿರಂಗವಾಗದæೕ ಉಳಿದಿಲ್ಲ. ‘ವಿವೇಕ’ ಹೆಸರಿನಡಿ 800 ಶಾಲಾ ಕೊಠಡಿಗಳನ್ನು ನಿರ್ಮಿಸಲು ಶಿಲಾನ್ಯಾಸ ನಡೆಸಲಾಗಿದೆ. ಸಮಾಜವಾದದ ಸಿದ್ಧಾಂತದಡಿಯಲ್ಲಿ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಿಸಿ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರೈತರು, ಕಾರ್ಮಿಕರು, ಮೀನುಗಾರರ ಮಕ್ಕಳು ವಿದ್ಯಾಭ್ಯಾಸ ಮಾಡಲು ವಿದ್ಯಾನಿಧಿ ನೀಡಲಾಗಿದೆ. ‘ಯಶಸ್ವಿನಿ’ ಯೋಜನೆ ಮತ್ತೆ ತರಲಾಗಿದೆ. ರೈಲ್ವೆ ವ್ಯವಸ್ಥೆಯನ್ನು ತಾಳಗುಪ್ಪದಿಂದ ಮುಂದುವರಿಸಲು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಪ್ರಧಾನಿ ನರæೕಂದ್ರ ಮೋದಿ ಅವರ ಆಡಳಿತ, ಪರಿಶ್ರಮದಿಂದ ವಿಶ್ವದಲ್ಲಿ ಭಾರತ ಶಕ್ತಿಶಾಲಿಯಾಗುತ್ತಿದæ. ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದæ. ಕೆಲವೇ ವರ್ಷಗಳಲ್ಲಿ ಅಗ್ರಗಣ್ಯ ಸ್ಥಾನ ಪಡೆಯಲಿದೆ. ಸೊರಬವನ್ನು ಮಾದರಿ ತಾಲೂಕು ಮಾಡುವ ಚಿಂತನೆ ಯಡಿಯೂರಪ್ಪ ಅವರಿಗಿದ್ದು ಸಹಕರಿಸುವುದಾಗಿ ತಿಳಿಸಿದ ಅವರು, ಯಡಿಯೂರಪ್ಪ ಅವರು ರೈತರಿಗೆ, ಧೀನ ದಲಿತರಿಗೆ, ಮಹಿಳೆಯರಿಗೆ ತಂದಿರುವ ಯೋಜನೆಗಳನ್ನು ಸ್ಮರಿಸಿಕೊಂಡರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಸೈನಿಕರು ಹಾಗೂ ರೈತರ ಬಗ್ಗೆ ಬಿಜೆಪಿ ವಿಶೇಷ ಒತ್ತು ನೀಡಿದೆ. ಕೃಷಿ ಸಮ್ಮಾನ್‌ ಯೋನೆಯಡಿ ರೈತರ ಖಾತೆಗೆ ಕೇಂದ್ರ ಸರ್ಕಾರ .310 ಕೋಟಿ, ರಾಜ್ಯ ಸರ್ಕಾರ 110 ಕೋಟಿ ಹಣವನ್ನು ಜಮೆ ಮಾಡಲಾಗಿದೆ. ಸುಕನ್ಯಾ ಸಮೃದ್ಧಿ ಯೋಜನೆಯಡಿ 2023ಕ್ಕೆ 20 ಸಾವಿರ ಹೆಣ್ಣುಮಕ್ಕಳಿಗೆ .1 ಲಕ್ಷ ಹಣ ಸಂದಾಯ ಮಾಡುವ ಚಿಂತನೆ ಮಾಡಲಾಗಿದೆ. ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಕೊಡಲು ಮುಂದಾಗಿದ್ದು, 2024ರ ಒಳಗೆ ಪೂರ್ಣಗೊಳಿಸಲಾಗುತ್ತದೆ ಎಂದರು.

ಶಾಸಕ ಕುಮಾರ ಬಂಗಾರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರರು. ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ, ಸಚಿವ ಬೈರತಿ ಬಸವರಾಜ್‌, ಶಿವಮೊಗ್ಗ ಗ್ರಾಮಾಂತರದ ಶಾಸಕ ಅಶೋಕ್‌ ನಾಯ್‌್ಕ, ವಿಧಾನಸಭೆ ಸದಸ್ಯರಾದ ಆಯನೂರು ಮಂಜುನಾಥ್‌, ರುದ್ರೇಗೌಡ, ಡಿ.ಎಸ್‌.ಅರುಣ್‌, ಶಾಸಕ ಕುಮಾರ್‌ ಬಂಗಾರಪ್ಪ, ಭಾನುಪ್ರಕಾಶ್‌, ಪುರಸಭೆ ಅಧ್ಯಕ್ಷ ಈರೇಶಪ್ಪ ಮೇಸ್ತ್ರಿ, ದತ್ತಾತ್ರಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಸಾಗರ ನಗರ ಸಭೆ ಅಧ್ಯಕ್ಷೆ ಮಧುರಾ ಶಿವಾನಂದ್‌, ಸಿದ್ಧರಾಮಣ್ಣ, ಕೆ.ಎಸ್‌. ಗುರುಮೂರ್ತಿ, ಪವಿತ್ರಾ ರಾಮಯ್ಯ, ಗೋಪಿ ಪ್ರಕಾಶ್‌, ಜ್ಯೋತಿ ಚೆನ್ನವೀರಪ್ಪ, ಬಿ.ಡಿ.ಭೂಕಾಂತ್‌, ಮೌನಪ್ಪ ಭಂಡಾರಿ, ಬಿ.ಕೆ.ಶ್ರೀನಾಥ್‌ ಮತ್ತಿತರರಿದ್ದರು.

‘ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಖಚಿತ’

ನಾಡಿನ ಜನತೆಗೆ ಬಿಜೆಪಿ ಸರ್ಕಾರದಿಂದ ಒಂದಿಲ್ಲೊಂದು ಸವಲತ್ತು ನೀಡಲಾಗಿದೆ. ಎಲ್ಲ ಜಾತಿ ಜನಾಂಗದ ಮಹನೀಯರ ಜಯಂತಿ ನಡೆಸಲಾಗುತ್ತಿದೆ ಎಂದು ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

20 ಲಕ್ಷ ಹೆಣ್ಣುಮಕ್ಕಳಿಗೆ ಭಾಗ್ಯಲಕ್ಷ್ಮೇ ಯೋಜನೆ ನೀಡಲಾಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಖಚಿತವಾಗಿದ್ದು, ಪ್ರತಿ ಗ್ರಾಮದಲ್ಲಿ ಮಹಿಳಾ ತಂಡ ಕಟ್ಟಿಸಬಲೀಕರಣ, ಯುವಕರ ಪಡೆ ಕಟ್ಟಿಕಾರ್ಯಪ್ರವೃತ್ತರನ್ನಾಗಿಸುವುದು ಸೇರಿದಂತೆ ಇನ್ನಿತರೆ ಹೊಸ ಪ್ರಯತ್ನದಿಂದ ಬಿಜೆಪಿಯನ್ನು ಅಧಿಕಾರಕ್ಕೆ ತರಲಾಗುವುದು. ಸೊರಬ ತಾಲೂಕಿನಲ್ಲಿ ಆನವಟ್ಟಿಕ್ಷೇತ್ರ ಪ್ರಮುಖವಾಗಿದ್ದು, ಸಣ್ಣಪುಟ್ಟಲೋಪ, ಗೊಂದಲಗಳನ್ನು ಮರೆತು ಪಕ್ಷ ಕಟ್ಟಬೇಕು ಎಂದರು. ಹಿಂದೂ ಸಮಾಜ ಅವಮಾನಿಸುವ ಮೂಲಕ ಆಡಳಿತ ಹಿಡಿಯುವ ಯತ್ನ ಫಲಿಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮೂರು ತಲೆಮಾರು ಕೂತು ತಿನ್ನುವಷ್ಟುಆಸ್ತಿ ಮಾಡಿಕೊಂಡಿರುವ ನಾವುಗಳು ಗಾಂಧಿ ಕುಟುಂಬಕ್ಕೆ ಚಿರಋುಣಿ ಆಗಿರಬೇಕೆಂದು ಹೇಳುವ ರಮೇಶ್‌ಕುಮಾರ್‌ ಅವರು ಕಾಂಗ್ರೆಸ್‌ ಆಡಳಿತದ ಭ್ರಷ್ಟಾಚಾರ ಬಹಿರಂಗಪಡಿಸಿದ್ದಾರೆ. ರಾಜ್ಯದಲ್ಲಿ ಪ್ರತಿದಿನ ನೂರಾರು ಕುಟುಂಬಗಳು ಮತಾಂತರವಾಗುತ್ತಿದ್ದು, ಈ ವಿಷಯವಾಗಿ ಸುಪ್ರೀಂ ಕೋರ್ಚ್‌ ಕೂಡ ಕಳವಳ ವ್ಯಕ್ತಪಡಿಸಿದೆ. ಅದಕ್ಕæ್ಕ ಅನುಗುಣವಾಗಿ ಮತಾಂತರ ತಡೆಯಲು ಮತಾಂತರ ನಿಷೇಧ ಕಾನೂನು ಜಾರಿಗೆ ತಂದಿದ್ದೇವೆ ಎಂದರು.

ಮೂಲ- ವಲಸಿಗರ ಮಧ್ಯೆ ತಿಕ್ಕಾಟ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ..!

ಪಿಎಸ್‌ಐ ಹಗರಣ ಪ್ರಕರಣವನ್ನು ಸಿಓಡಿಗೆ ತನಿಖೆಗೆ ಒಪ್ಪಿಸಲಾಗಿದೆ. ಉನ್ನತ ಹುದ್ದೆ ಅಧಿಕಾರಿಗಳು ಸೇರಿದಂತೆ 106 ಮಂದಿಯನ್ನು ಬಂಧಿಸಲಾಗಿದೆ. ಬೆಂಗಳೂರು ಹೊರತು ಪಡಿಸಿ ಉಳಿದ ಕಡೆ ಭೂ ಕಬಳಿಕೆಗೆ ಅನ್ವಯವಾಗಿದ್ದ ಕಾನೂನನ್ನು ಹಿಂಪಡೆಯಲಾಗಿದೆ. ಸರಕಾರ ಸದಾ ಜನಪರವಾಗಿ ಕೆಲಸ ಮಾಡಿದೆ ಎಂದರು.

Latest Videos
Follow Us:
Download App:
  • android
  • ios