Asianet Suvarna News Asianet Suvarna News

ಅಪರಾಧ ಕೃತ್ಯಗಳು ಹೆಚ್ಚಳ ಹಿನ್ನೆಲೆ: 248 ಪೊಲೀಸ್ ಅಧಿಕಾರಿಗಳು ಏಕಕಾಲಕ್ಕೆ ಫೀಲ್ಡ್‌ಗೆ!

ಹುಬ್ಬಳ್ಳಿ-ಧಾರವಾಡ ನಗರದ ಒಟ್ಟು 248 ಪೊಲೀಸ್ ಅಧಿಕಾರಿಗಳು ಏಕಕಾಲಕ್ಕೆ ಫೀಲ್ಡ್‌ಗೆ ಇಳಿದಿದ್ದು, ರೌಡಿಶೀಟರ್‌ ಮನೆಗಳಲ್ಲಿ ತಪಾಸಣೆ, ಬಾರ್ & ರೆಸ್ಟೋರಂಟ್‌ಗಳಿಗೂ ಎಚ್ಚರಿಕೆ ನೀಡಿದ್ದಾರೆ.

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಅಪರಾಧ ಕೃತ್ಯಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾತ್ರಿಯೀಡಿ ಅವಳಿ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದರು. ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಹುಬ್ಬಳ್ಳಿ-ಧಾರವಾಡ(Hubli- Dharwad) ನಗರದ ಒಟ್ಟು 248 ಪೊಲೀಸ್ ಅಧಿಕಾರಿಗಳು (Police officers) ಏಕಕಾಲಕ್ಕೆ ಫೀಲ್ಡ್‌ಗೆ ಇಳಿದಿದ್ದರು. ರೌಡಿಶೀಟರ್‌ ಮನೆಗಳಲ್ಲಿ ತಪಾಸಣೆ, ಬಾರ್ & ರೆಸ್ಟೋರಂಟ್‌ಗಳಿಗೂ(Bar & restaurants) ಎಚ್ಚರಿಕೆ ನೀಡಿದ್ದಾರೆ. ಕಾನೂನು ಬಾಹಿರ, ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗದಿರುವಂತೆ ಸೂಚನೆ ನೀಡಲಾಗಿದೆ. ತಡರಾತ್ರಿ ನಗರದಲ್ಲಿ ಸಂಚರಿಸುತ್ತಿದ್ದ 150ಕ್ಕೂ ಹೆಚ್ಚು ವಾಹನಗಳ ತಪಾಸಣೆ ನಡೆಸಲಾಗಿದೆ.

ಇದನ್ನೂ ವೀಕ್ಷಿಸಿ:  8 ತಿಂಗಳ ಹಿಂದೆ ನಾಪತ್ತೆ..ಈಗ ಮರ್ಡರ್..! ಜಮೀನಿನಲ್ಲಿ ಅವನ ಎಲುಬುಗಳು ಪತ್ತೆ..!

Video Top Stories