ಹುಬ್ಬಳ್ಳಿ: ಸಚಿವರ ಪುತ್ರಿ ಮದುವೆ, ರಸ್ತೆಗಳಿಗೆ ಡಾಂಬರ್ ಭಾಗ್ಯ..!
* ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯಿಂದ ರಸ್ತೆ ಕಾಮಗಾರಿ
* ಹದಗೆಟ್ಟಿರುವ ಹುಬ್ಬಳ್ಳಿಯ ರಸ್ತೆಗಳಿಗೆ ಯಾವಾಗ ದುರಸ್ತಿ ಮಾಡಿಸ್ತೀರಾ ಸ್ವಾಮಿ?
* ರಸ್ತೆಗಳ ಅವ್ಯವಸ್ಥೆಯಿಂದ ಡಸ್ಟ್ ಸಿಟಿಯಾಗಿರುವ ಹುಬ್ಬಳ್ಳಿ
ಹುಬ್ಬಳ್ಳಿ(ಆ.28): ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪುತ್ರಿಯ ವಿವಾಹ ಸಮಾರಂಭ ಹಿನ್ನೆಲೆಯಲ್ಲಿ ನಗರದ ರಸ್ತೆಗಳಿಗೆ ದುರಸ್ತಿ ಕಾರ್ಯ ನಡೆಯುತ್ತಿದೆ. ಹೌದು, ಸೆ.2 ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಮದುವೆ ಸಮಾರಂಭ ನಡೆಯಲಿದೆ. ಮದುವೆ ಕಾರ್ಯಕ್ರಮಕ್ಕೆ ಗಣ್ಯಾತಿಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ದುರಸ್ತಿ ನಡೆಯುತ್ತಿದೆ. ರಸ್ತೆಯಲ್ಲಿನ ಗುಂಡಿ ಮುಚ್ಚಿ ಅಂತ ಎಷ್ಟೇ ಮನವಿ ಮಾಡಿದ್ರೂ ಅಧಿಕಾರಿಗಳು ಮಾತ್ರ ಸ್ಪಂದಿಸಿರಲಿಲ್ಲ. ಸಚಿವರ ಪುತ್ರಿ ಮದುವೆ ಸಮಾರಂಭದ ಹಿನ್ನೆಲೆ ರಸ್ತೆಗೆ ಕಾಯಕಲ್ಪ ನೀಡಲಾಗುತ್ತಿದೆ. ಹೀಗಾಗಿ ಮಹಾನಗರ ಪಾಲಿಕೆ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.