ಆ ಸಾವಿಗೆ ಕಾರಣ.. ಈಗಲೂ ಅನುಮಾನ..ಈಗ ನೆನಪಾಗುತ್ತಿದೆ ಏಕೆ ಆ ನಿರ್ಮಾಪಕನ ಸಾವು..?

ಸೌಂದರ್ಯ ಜಗದೀಶ್ ಕೇಸಲ್ಲಿ ಯಾಕೆ ದರ್ಶನ್ ಹೆಸರು..?
ಪವಿತ್ರಾ ಗೌಡ ಬ್ಯಾಂಕ್ ಖಾತೆಗೆ ಹೇಗೆ ಬಂತು ಆ 2 ಕೋಟಿ !?
ನಿರ್ಮಾಪಕನ ಸಾವಿನಗುಟ್ಟು ಬಯಲು ಮಾಡ್ತು ಡೆತ್ ನೋಟ್!

Share this Video
  • FB
  • Linkdin
  • Whatsapp

2 ತಿಂಗಳ ಹಿಂದಿನ ಆತ್ಮಹತ್ಯೆಗೆ ಈಗ ಸಿಕ್ಕಿದೆ ಬಿಗ್ ಟ್ವಿಸ್ಟ್. 2 ಕೋಟಿಯ ರಹಸ್ಯದ ಬೆನ್ನತ್ತಿ ಹೋದರೆ ಹೊಸದೊಂದು ಕತೆಯೇ ಎದ್ದು ಕಾಣ್ತಾ ಇದೆ. ರಾಜ್ಯವನ್ನೇ ದಿಗ್ಭ್ರಾಂತಗೊಳಿಸಿದ್ದ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ(Soundarya Jagadish) ಕೇಸಲ್ಲೂ ಕೂಡ ಈಗ ದರ್ಶನ್(Darshan) ಹೆಸರು ಕಾಣಿಸಿಕೊಳ್ತಾ ಇದೆ. ಪವಿತ್ರಾ ಗೌಡ ಖಾತೆಗೆ ಕೋಟಿಗಟ್ಟಲೆ ಸೌಂದರ್ಯ ಜಗದೀಶ್ ಕೋಟಿಗಟ್ಟಲೆ ಹಣ ಹಾಕಿದ್ದೇಕೆ ಅನ್ನೋ ಪ್ರಶ್ನೆ ಮೂಡಿದೆ. ನಟ ಭಯಂಕರ ದರ್ಶನ್ ಈಗ ಜೈಲುಪಾಲು. ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ಖೈದಿ ಸಂಖ್ಯೆ, 6106. 13 ವರ್ಷಗಳ ಹಿಂದೆ ತಮ್ಮ ಪತ್ನಿ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತು ಹತ್ತಾರು ದಿನಗಳ ಕಾಲ ವಿಚಾರಣಾಧೀನ ಖೈದಿಯಾಗಿ ಸೆರೆಮನೆ ವಾಸ ಅನುಭವಿಸಿದ್ದ ದರ್ಶನ್ ಈಗ 2ನೇ ಬಾರಿ ಕೊಲೆ ಆರೋಪದಲ್ಲಿ ಜೈಲು ಸೇರಿದ್ದಾಗಿದೆ. ರೇಣುಕಾಸ್ವಾಮಿಗೆ(Renukaswamy murder case) ನರಕ ಯಾತನೆ ಕೊಟ್ಟು, ಕೊನೆಗೆ ಕೊಲೆ ಮಾಡಿ ಆತನ ಡೆಡ್ ಬಾಡಿನಾ ರಾಜಕಾಲುವೆಗೆ ಬಿಸಾಕಿ, ಸಾಕ್ಷಿ ನಾಶ ಮಮಾಡೋ ಕೆಲಸ ಮಾಡಿತ್ತು ಡಿ-ಗ್ಯಾಂಗ್. ಇದರಲ್ಲಿ ಅತಿ ಮುಖ್ಯ ಆರೋಪಿಯಾಗಿದ್ದದ್ದು, ದರ್ಶನ್.. ಅಮಾನುಷವಾಗಿ ಕ್ರೌರ್ಯದ ಪರಾಕಾಷ್ಠೆ ಮೆರೆದು, ರೇಣುಕಾಸ್ವಾಮಿಯ ಕಗ್ಗೊಲೆ ಮಾಡಿದ ಆರೋಪದ ಮೇಲೆ, ದರ್ಶನ್ ಕಂಬಿ ಹಿಂದೆ ನಿಲ್ಲಬೇಕಾಗಿದೆ.

ಇದನ್ನೂ ವೀಕ್ಷಿಸಿ: ಏನಿದು ಸೂರಜ್ ರೇವಣ್ಣನ ಕಾಮ ಪುರಾಣ..? ತಮ್ಮ ಹಂಗೆ..ಅಣ್ಣ ಹಿಂಗೆ..! ರೇವಣ್ಣ ಕುಟುಂಬ ವಿಲವಿಲ!

Related Video