ಸೋಶಿಯಲ್ ಮೀಡಿಯಾ ಆಯ್ತು, ದತ್ತಪೀಠದಲ್ಲೂ ಹೌದು ಹುಲಿಯಾ ಹವಾ!

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿರುವ ಹೌದು ಹುಲಿಯಾ ಈಗ ಚಿಕ್ಕಮಗಳೂರು ದತ್ತ ಪೀಠದಲ್ಲೂ ಪ್ರತಿಧ್ವನಿಸಿದೆ. ಇಲ್ಲಿದೆ ಮತ್ತಷ್ಟು ವಿವರ 

First Published Dec 12, 2019, 4:28 PM IST | Last Updated Dec 12, 2019, 4:28 PM IST

ಚಿಕ್ಕಮಗಳೂರು (ಡಿ.12): ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸದ್ದು ಮಾಡಿರುವ ಹೌದು ಹುಲಿಯಾ ಡೈಲಾಗ್ ವಿವಾದಿತ ದತ್ತಪೀಠದಲ್ಲೂ ಕೇಳಿಬಂತು. 

ರಾಜ್ಯದ ವಿವಿಧಡೆಯಿಂದ ದತ್ತಪಾದುಕೆ ದರ್ಶನಕ್ಕಾಗಿ ವಿವಾದಿತ ದತ್ತಪೀಠಕ್ಕೆ ದತ್ತಭಕ್ತರು ಆಗಮಿಸಿದ್ದರು. ದರ್ಶನ ಪಡೆಯುಲು  ಸಾಲಿನಲ್ಲಿ ನಿಂತು ದತ್ತ ಭಕ್ತರು ಘೋಷಣೆಗಳು  ಕೂಗಿದರು. 

ಅವುಗಳ ಪೈಕಿ ಹೌದು ಹುಲಿಯಾ ಡೈಲಾಗ್ ಕೂಡ ಒಂದು! ದತ್ತಪೀಠ ನಮ್ಮದು ಹೌದು ಹುಲಿಯಾ, ದತ್ತಪೀಠ ಯಾರದ್ದು ಹಿಂದೂಗಳದ್ದು ಹೌದು ಹುಲಿಯಾ ಎನ್ನುವ ಡೈಲಾಗ್ ದತ್ತಭಕ್ತರಿಂದ ಕೇಳಿಬಂತು.

ಇದನ್ನೂ ನೋಡಿ | ಚುನಾವಣೆ ಮುಗಿದ್ರೂ ನಿಲ್ಲದ ಆಪರೇಶನ್, ಬೆಳಗಾವಿ 'ಹುಲಿ' ಬಿಜೆಪಿ ಬೋನಿಗೆ!...
 

 

Video Top Stories