ಇಡಿ ದಾಳಿಯಿಂದ ಸರ್ಕಾರಕ್ಕೆ ಮುಜುಗರ ಎಂಬ ಪ್ರಶ್ನೆ ಬರಲ್ಲ, ನಾವು ಎಸ್ಐಟಿ ತನಿಖೆಗೆ ನೀಡಿದ್ದೇವೆ: ಡಾ.ಜಿ. ಪರಮೇಶ್ವರ್
ಇಡಿ ಎಂಟ್ರಿಯಿಂದ ಸರ್ಕಾರಕ್ಕೆ ಮುಜುಗರ ಇಲ್ಲ. ಇಡಿ ಸ್ವತಂತ್ರವಾಗಿ ತನಿಖೆ ಮಾಡುತ್ತಿದೆ ಎಂದು ಬೆಂಗಳೂರಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಅಕ್ರಮ ತನಿಖೆಗೆ ಇಡಿ(ED) ಎಂಟ್ರಿಯಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ (Home Minister Parameshwar) ಪ್ರತಿಕ್ರಿಯೆ ನೀಡಿದ್ದಾರೆ. ಇಡಿ ಎಂಟ್ರಿಯಿಂದ ಸರ್ಕಾರಕ್ಕೆ ಮುಜುಗರ ಇಲ್ಲ. ಎಂದು ಬೆಂಗಳೂರಲ್ಲಿ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಎಸ್ಐಟಿ(SIT) ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ. ಈ ಮಧ್ಯೆ ಇ.ಡಿ ಅಧಿಕಾರಿಗಳು ಕೂಡ ಎಂಟ್ರಿಯಾಗಿದ್ದಾರೆ. ಯಾವುದೂ ಸಾಬೀತಾಗದೇ ನಾನು ಪ್ರತಿಕ್ರಿಯೆ ನೀಡಲಾಗಲ್ಲ. ಇ.ಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಏನೂ ತಿಳಿಸಲ್ಲ. ಇ.ಡಿ ಸ್ವತಂತ್ರವಾಗಿ ತನಿಖೆ ಮಾಡುತ್ತಿದೆ. ಇ.ಡಿ ದಾಳಿಯಿಂದ ಸರ್ಕಾರಕ್ಕೆ ಮುಜುಗರದ ಪ್ರಶ್ನೆ ಬರಲ್ಲ. ಎಸ್ಐಟಿ ತನಿಖೆಗೆ ನೀಡಿದ್ದೇವೆ, ಸಿಬಿಐ ಕೂಡ ತನಿಖೆ ಮಾಡ್ತಿದೆ. ಎಸ್ಐಟಿ, ಸಿಬಿಐ ತನಿಖೆ ಮಧ್ಯೆ ನಾವು ಬರಲು ಆಗಲ್ಲ. ಅವರು ಎಲ್ಲವನ್ನೂ ಗಮನಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ಪರಮೇಶ್ವರ್ ಹೇಳಿದರು.
ಇದನ್ನೂ ವೀಕ್ಷಿಸಿ: ಇಂದು ಬಿಜೆಪಿ ಹೈ ವೋಲ್ಟೇಜ್ ಮೀಟಿಂಗ್: ಯತ್ನಾಳ್, ಸಿಟಿ ರವಿ ಹೆಸರು ಕೈ ಬಿಟ್ಟಿದ್ದಕ್ಕೆ ತೀವ್ರ ಅಸಮಾಧಾನ