ಮಸೀದಿಯಲ್ಲಿ ಹಿಂದೂ ಕುಶಲಕರ್ಮಿಯ ಕೈಚಳಕ, ಕೋಮು ಸೂಕ್ಷ್ಮ ಮಂಗಳೂರಿನ ಸೌಹಾರ್ದತೆಯ ಕಥೆ
ಹಿಂದೂ ಕುಶಲಕರ್ಮಿಯಿಂದ ಮಸೀದಿಗೆ ಕೆತ್ತನೆ ಕೆಲಸ ಮಾಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ. ನವೀಕೃತ ಮಸೀದಿಗೆ ಹಿಂದೂ ಕುಶಲಕರ್ಮಿ ಕಾಷ್ಠಶಿಲ್ಪ. ಕೋಮು ಸೂಕ್ಷ್ಮ ಮಂಗಳೂರಿನ ಸೌಹಾರ್ದತೆಯ ಕಥೆ
ಮಂಗಳೂರು, (ಏ.19): ರಾಜ್ಯದಲ್ಲಿ ಹಿಜಾಬ್ (Hijab) ವಿವಾದದಿಂದ ಆರಂಭಗೊಂಡ ಧರ್ಮ ಸಂಘರ್ಷ (Religious conflict) ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕೋರ್ಟ್ ತೀರ್ಪು ವಿರೋಧಿಸಿ ಕೆಲ ಮುಸ್ಲಿಂ ಸಂಘಟನೆಗಳು ಬಂದ್ ಕರೆ ನೀಡುತ್ತಿದ್ದಂತೆ ಹಿಂದೂ ಸಂಘಟನೆಗಳಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹಲಾಲ್ ಕಟ್ (Halal Cut) ನಿಷೇಧ, ಮುಸ್ಲಿಂ ವ್ಯಾಪಾರಿಗಳಿಗೆ ಬಾಯ್ಕಾಟ್, ಆಜಾನ್‌ಗೆ ತಡೆ ಹೀಗೆ ಹಲವು ವಿಚಾರಗಳನ್ನ ಹಿಂದೂ ಕಾರ್ಯಕರ್ತರು ವಿರೋಧಿಸುತ್ತಿದ್ದಾರೆ. ಇದೀಗ ವಿಗ್ರಹ ( idol ) ವಿಚಾರದಲ್ಲೂ ವಾರ್ ಶುರುವಾಗಿದ್ದು ಮುಸ್ಲಿಮರು ಕೆತ್ತನೆ ಮಾಡಿದ ಹಿಂದೂ ದೇವರ ವಿಗ್ರಹ ಖರೀದಿಸದಂತೆ ಅಭಿಯಾನ ಆರಂಭಿಸಲಾಗಿತ್ತು.
ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ Mandya ದಲ್ಲಿ ಅಭಿಯಾನ
ಇದೀಗ ಇದರ ಮಧ್ಯೆ ಹಿಂದೂ ಕುಶಲಕರ್ಮಿಯಿಂದ ಮಸೀದಿಗೆ ಕೆತ್ತನೆ ಕೆಲಸ ಮಾಡಿಸುವ ಮೂಲಕ ಸೌಹಾರ್ದ ಮೆರೆದಿದ್ದಾರೆ. ನವೀಕೃತ ಮಸೀದಿಗೆ ಹಿಂದೂ ಕುಶಲಕರ್ಮಿ ಕಾಷ್ಠಶಿಲ್ಪ. ಕೋಮು ಸೂಕ್ಷ್ಮ ಮಂಗಳೂರಿನ ಸೌಹಾರ್ದತೆಯ ಕಥೆ