ಕಲಬುರಗಿಯಲ್ಲಿ ಭಾರೀ ಮಳೆ: ಮನೆ ಗೋಡೆ ಬಿದ್ದು ಬಾಲಕಿ ಸಾವು
*ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಾದ್ಯಂತ ಭಾರೀ ಮಳೆ
* ಹಲವು ಗ್ರಾಮಗಳ ಸೇತುವೆಗಳು, ರಸ್ತೆಗಳು ಜಲಾವೃತ
* ರಾಯಚೂರಿನಲ್ಲೂ ಮಳೆಗೆ ವಾಟರ್ ಫಿಲ್ಟರ್ ಹಾಳು
ಕಲಬುರಗಿ(ಜೂ.03): ಭಾರೀ ಮಳೆಗೆ ಮನೆಯ ಗೋಡೆ ಬಿದ್ದು ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಜಿಲ್ಲೆಯ ಬಳುಂಡಗಿ ಗ್ರಾಮದಲ್ಲಿ ನಿನ್ನೆ(ಬುಧವಾರ) ನಡೆದಿದೆ. ನೀಲಮ್ಮ ಎಂಬಾಕೆಯೇ ಮೃತಪಟ್ಟ ದುರ್ದೈವಿ ಬಾಲಕಿಯಾಗಿದ್ದಾಳೆ. ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಭಾರೀ ಮಳೆಗೆ ಹಲವು ಗ್ರಾಮಗಳ ಸೇತುವೆಗಳು, ರಸ್ತೆಗಳು ಜಲಾವೃತವಾಗಿವೆ. ಇನ್ನೂ ರಾಯಚೂರಿನಲ್ಲೂ ಮಳೆಗೆ ವಾಟರ್ ಫಿಲ್ಟರ್ ಹಾಳಾಗಿದೆ.
ಯೋಗೀಶ್ ಗೌಡ ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಭೇಟಿಗೆ ಡಿಕೆಶಿ ಅರ್ಜಿ