Udupi Rain: ಮಳೆ ನಿಂತರೂ ತಗ್ಗದ ನೆರೆ: ಜಾರಂದಾಯ ದೇಗುಲಕ್ಕೆ ಜಲದಿಗ್ಬಂಧನ

ಉಡುಪಿಯಲ್ಲಿ ವರುಣ ಅಬ್ಬರಿಸಿದ್ದು, ನೆರೆ ಸೃಷ್ಟಿಯಾಗಿದೆ. ಅಲ್ಲದೇ ಕೆಲವು ಕಡೆ ಗದ್ದೆಗಳು ಮುಳುಗಡೆಯಾಗಿವೆ.
 

First Published Jul 8, 2023, 9:57 AM IST | Last Updated Jul 8, 2023, 9:57 AM IST

ಉಡುಪಿ: ಜಿಲ್ಲೆಯಲ್ಲಿ ಮಳೆ (Rain) ನಿಂತರೂ ವರುಣನ ಅವಾಂತರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯ ಕಾಪು(Kapu) ತಾಲೂಕಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಪಡುಬಿದ್ರೆ, ಪಡುಹಿತ್ಲು ಪ್ರದೇಶದಲ್ಲಿ ಗದ್ದೆಗಳು ಮುಳುಗಡೆಯಾಗಿವೆ. ಅಲ್ಲದೇ ಪಡುಬಿದ್ರೆ ಕಡಲ ತೀರದ ಜಾರಂದಾಯ ದೈವಸ್ಥಾನ ( Jarandaya deity) ಜಲಾವೃತವಾಗಿದೆ. ದಶಕದಲ್ಲೇ ಅತೀ ಹೆಚ್ಚು ಮಳೆಯಾಗಿದ್ದು, ಅನೇಕ ಹೊಲ, ಗದ್ದೆಗಳು ಮುಳುಗಡೆಯಾಗಿವೆ. ಮಳೆ ತಡವಾದ ಹಿನ್ನೆಲೆ ರೈತರು ಕೃಷಿಯನ್ನು ಸಹ ಮಾಡಿರಲಿಲ್ಲ. ಆದ್ರೆ ಈಗ ಮಳೆ ಹೆಚ್ಚಿಗೆಯಾಗಿ, ಗದ್ದೆಗಳು ಸಂಪೂರ್ಣವಾಗಿ ಮುಳುಗಡೆಯಾಗಿವೆ. ಹಾಗಾಗಿ ಜಿಲ್ಲಾಡಳಿತ ತಗ್ಗು ಪ್ರದೇಶಗಳಲ್ಲಿರುವ ರೈತರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗಿದೆ.

ಇದನ್ನೂ ವೀಕ್ಷಿಸಿ:  ಕಾಣೆಯಾಗಿದ್ದ ಜೈನ ಮುನಿ ಬರ್ಬರ ಹತ್ಯೆ: ಇಬ್ಬರ ಬಂಧನ, ಸಿಗದ ಮೃತದೇಹ