ದರ್ಶನ್ ಭೇಟಿ ಮಾಡಿದ ಕುಟುಂಬಸ್ಥರು, ಸ್ನೇಹಿತರು..!ಪೊಲೀಸ್ ಆಯುಕ್ತರಿಗೆ ವಿಜಯಲಕ್ಷ್ಮಿ ಬರೆದ ಪತ್ರದಲ್ಲೇನಿದೆ..?

ನನ್ನ ಮುಂದಿನ ಜೀವನಕ್ಕೆ ತೊಂದರೆ ಆಗದಿರಲಿ ಎಂದ ವಿಜಯಲಕ್ಷ್ಮಿ..!
ಗಂಡನನ್ನು ಸೆರೆಮನೆ ವಾಸದಿಂದ ಬಿಡಿಸಿಕೊಂಡು ಬರಲು ಶತಪ್ರಯತ್ನ..!
ದಾಖಲೆಗಳಲ್ಲಿ ಸರಿಯಾದ ಮಾಹಿತಿ ಉಲ್ಲೇಖಿಸಿ ಎಂದು ಪತ್ರದಲ್ಲಿ ಉಲ್ಲೇಖ..!
ದರ್ಶನ್ ‘ಏಕೈಕ ಪತ್ನಿ ನಾನೇ’ಎಂದು ಒತ್ತಿ ಹೇಳ್ತಿರೋದ್ಯಾಕೆ ವಿಜಯಲಕ್ಷ್ಮಿ..?

Share this Video
  • FB
  • Linkdin
  • Whatsapp

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ( Chitradurga Renukaswamy murder case) ಬಂಧಿತಳಾಗಿರುವ ಪವಿತ್ರಾ ಗೌಡಳನ್ನು(Pavitra Gowda) ದರ್ಶನ್(Darshan) ಪತ್ನಿ ಎಂದು ಉಲ್ಲೇಖಿಸದಂತೆ ನಗರ ಪೊಲೀಸ್‌ ಆಯುಕ್ತರಿಗೆ(City police commissioner) ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ(Vijayalakshmi) ಪತ್ರ ಬರೆದಿದ್ದಾರೆ. 2003ರಲ್ಲಿ ನಾನು ಹಾಗೂ ದರ್ಶನ್ ವಿವಾಹವಾಗಿದ್ದು, ನಮಗೆ ಓರ್ವ ಮಗನಿದ್ದಾನೆ. ಆದರೆ ಸಂಜಯ್ ಸಿಂಗ್ ಎಂಬುವರ ಜತೆ ಪವಿತ್ರಾಗೌಡಳಿಗೆ ಮದುವೆಯಾಗಿದ್ದು, ಅವರಿಗೂ ಒಬ್ಬ ಮಗಳಿದ್ದಾಳೆ. ಆದರೆ ನೀವು (ಆಯುಕ್ತರು) ಪತ್ರಿಕಾಗೋಷ್ಠಿಯಲ್ಲಿ ದರ್ಶನ್‌ರವರ ಪತ್ನಿ ಪವಿತ್ರಾಗೌಡ ಎಂದು ಹೇಳಿದ್ದೀರಿ. ಅದೇ ರೀತಿ ಒಮ್ಮೆ ಗೃಹಸಚಿವರು ಉಚ್ಚರಿಸಿದ್ದಾರೆ. ಹೀಗಾಗಿ ಪೊಲೀಸ್ ದಾಖಲೆಗಳಲ್ಲಿ ಪವಿತ್ರಾ ಗೌಡಳನ್ನು ದರ್ಶನ್‌ರವರ ಪತ್ನಿ ಎಂದು ಉಲ್ಲೇಖಿಸದಂತೆ ವಿಜಯಲಕ್ಷ್ಮೀ ಕೋರಿದ್ದಾರೆ.

ಇದನ್ನೂ ವೀಕ್ಷಿಸಿ: ಸೋಷಿಯಲ್ ಮೀಡಿಯಾ ಸ್ಟಾರ್ ರಾಯ್ ಸಿಜೆ..! ಯುವಕರಿಗೆ ಸ್ಫೂರ್ತಿ..ಬೆಂಗಳೂರು ಟು ದುಬೈವರೆಗೂ ಹಬ್ಬಿದೆ ಕೀರ್ತಿ..!

Related Video