ಕೊಡಗು, ಉಡುಪಿ, ಕಾರವಾರದಲ್ಲಿ ಭಾರಿ ಮಳೆ: ದೇಗುಲ ಜಲಾವೃತ, ಮನೆಗಳಿಗೂ ನುಗ್ಗಿದ ನೀರು
ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ.
ಕೊಡಗು ಮತ್ತು ಉಡುಪಿಯಲ್ಲಿ ಮಳೆಯಾರ್ಭಟ ಜೋರಾಗಿದೆ. ಕೊಡಗಿನಲ್ಲಿ ಮಳೆಗೆ ತ್ರಿವೇಣಿ ಸಂಗಮ ಮುಳುಗಡೆಯಾಗಿದೆ. ಅಲ್ಲದೇ ಧಾರಾಕಾರ ಮಳೆಗೆ (Rain) ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದಾಳೆ. ಕರಿಕೆ, ಚೆಂಬು, ಸಂಪಾಜೆ, ನಾಪೋಕ್ಲು ಮತ್ತು ಭಾಗಮಂಡಲ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಗಾಳಿ ಮಳೆಗೆ ಮನೆ ಮೇಲೆ ಮರ ಹಾಗೂ ಬೃಹತ್ ವಿದ್ಯುತ್ ಕಂಬ ಮುರಿದು ಬಿದ್ದಿರುವ ಘಟನೆ ಕುಶಾಲನಗರದಲ್ಲಿ ನಡೆದಿದೆ. ದಕ್ಷಿಣ ಕನ್ನಡ (Dakshina Kannada) ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆ ಆಗುತ್ತಿದೆ. ಉಡುಪಿ (Udupi) ಜಿಲ್ಲೆಯಲ್ಲಿ ವರುಣ ಅರ್ಭಟ ಇಂದು ಸಹ ಮುಂದುವರೆದಿದ್ದು, ಭಾರೀ ಗಾಳಿ ಧಾರಾಕಾರ ಮಳೆಗೆ ಮತ್ತೊಂದು ಬಲಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು, 650ಕ್ಕೂ ಹೆಚ್ಚು ಮನೆಗಳು ಜಲದಿಗ್ಬಂಧನಕ್ಕೊಳಗಾಗಿವೆ. 100ಕ್ಕೂ ಹೆಚ್ಚು ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಇದನ್ನೂ ವೀಕ್ಷಿಸಿ: Rashibhavishy: ಈ ದಿನದ ನಿಮ್ಮ ರಾಶಿ ಭವಿಷ್ಯ ಹೀಗಿದ್ದು, ಲಲಿತಾ ಪರಮೇಶ್ವರಿ ಆರಾಧನೆಯನ್ನು ಮಾಡಿ..