ಹಾವೇರಿಯಲ್ಲಿ ಮನೆ ಗೋಡೆ ಕುಸಿದು ಮೂವರು ಸಾವು..ನಿರಂತರ ಮಳೆಗೆ ಕುಸಿದ ಮನೆ ಗೋಡೆ

ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಮೂವರು ಸಾವಿಗೀಡಾಗಿದ್ದಾರೆ.
 

Share this Video
  • FB
  • Linkdin
  • Whatsapp

ಹಾವೇರಿ(Haveri)‌ ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಮೂವರು ಬಲಿಯಾಗಿದ್ದು, ಮನೆ‌ ಗೋಡೆ ಕುಸಿದ ಮೂವರು ಸಾವಿಗೀಡಾಗಿದ್ದಾರೆ. ಚೆನ್ನಮ್ಮ(30), ಮಕ್ಕಳಾದ ಅಮೂಲ್ಯ, ಅನುಶ್ರಿ ಮೃತಪಟ್ಟಿದ್ದಾರೆ. ಹಾವೇರಿ(Haveri) ಜಿಲ್ಲೆ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಮೂವರಿಗೆ ಗಂಭೀರ ಗಾಯವಾಗಿದೆ. ಸುಮಾರು 30 ವರ್ಷದ ಚೆನ್ನಮ್ಮ ಹಾಗೂ ಅಮೂಲ್ಯ ಮತ್ತು ಅನುಶ್ರಿ ಎಂಬ ಎರಡು ಎಳೆಯ ಕಂದಮ್ಮಗಳು ಸಾವಿಗೀಡಾಗಿವೆ. ಕಳೆದ ಎರಡು ದಿನಗಳಿಂದ ನಿರಂತರ ಮಳೆಯಾಗ್ತಿರೋ(Rain) ಹಿನ್ನಲೆ ನಿರಂತರ ಮಳೆಗೆ ಮನೆ ಗೋಡೆ ಕುಸಿದಿದೆ(House wall collapsed). ನೆರೆ ಹೊರೆಯವರಿಂದ ಆಸ್ಪತ್ರೆಗೆ ದಾಖಲಿಸೋ ಪ್ರಯತ್ನ ನಡೆದರೂ ಚಿಕಿತ್ಸೆ ಫಲಕಾರಿಯಾಗದೇ ಮೂವರು ಸಾವನ್ನಪ್ಪಿದ್ದಾರೆ. ವೃದ್ದೆ ಯಲ್ಲಮ್ಮ, ಮುತ್ತು, ಸುನೀತಾ ಎಂಬುವವರಿಗೆ ಗಂಭೀರ ಗಾಯವಾಗಿದೆ. ಸುನೀತಾಗೆ ಗಂಭೀರ ಗಾಯವಾಗಿದ್ದು, ಸವಣೂರು ಸರ್ಕಾರಿ‌ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹುಲಗೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ವೀಕ್ಷಿಸಿ:  ವಿಧಾನಸಭೆಯಲ್ಲಿ ಸಿದ್ದು Vs ಅಶ್ವತ್ಥ್ ರಣರೋಚಕ ಜಂಗೀಕುಸ್ತಿ!"ನಿಮ್ಮವರದ್ದೆಲ್ಲಾ ಬಿಚ್ಚಿಡಬೇಕಾಗತ್ತೆ" ಸಿದ್ದರಾಮಯ್ಯ ಆರ್ಭಟ!

Related Video