ವಿಧಾನಸಭೆಯಲ್ಲಿ ಸಿದ್ದು Vs ಅಶ್ವತ್ಥ್ ರಣರೋಚಕ ಜಂಗೀಕುಸ್ತಿ!"ನಿಮ್ಮವರದ್ದೆಲ್ಲಾ ಬಿಚ್ಚಿಡಬೇಕಾಗತ್ತೆ" ಸಿದ್ದರಾಮಯ್ಯ ಆರ್ಭಟ!


ವಾಲ್ಮೀಕಿ ನಿಗಮದ ಅಕ್ರಮದ ಅಖಾಡದಲ್ಲಿ ಕೈ-ಕಮಲ ಮಹಾಯುದ್ಧ..! 
ವರುಣಾ ವಾರಸ್ದಾರನಿಗೂ.. ಮಲ್ಲೇಶ್ವರ ಮಗಧೀರನಿಗೂ ಜಿದ್ದಾಜಿದ್ದಿ..!
ವಿಧಾನಸಭೆಯ ಒಳಗೂ ಹೊರಗೂ ವಾಲ್ಮೀಕಿ ಅಕ್ರಮದ ಜ್ವಾಲೆ ಧಗಧಗ..!
 

Share this Video
  • FB
  • Linkdin
  • Whatsapp

ವಾಲ್ಮೀಕಿ ಅಕ್ರಮದ (Valmiki Corporation) ಅಖಾಡದಲ್ಲಿ ಕೈ-ಕಮಲ ನಾಯಕರ ಭರ್ಜರಿ ಜಂಗೀಕುಸ್ತಿ ನಡೆದಿದೆ. ಕರ್ನಾಟಕದ ವಿಧಾನಸಭೆ ಅದೆಷ್ಟೋ ಜಟಾಪಟಿ ಜಂಗೀಕುಸ್ತಿಗಳಿಗೆ ಸಾಕ್ಷಿಯಾಗಿದೆ. ವಿಧಾನಸೌಧ ಹೊರಗಿನ ಶತ್ರುತ್ವ ವಿಧಾನಸೌಧದ ಒಳಗೆ ಧಗಧಗಿಸಿದ್ದಿದೆ. ವೈಯಕ್ತಿಕ ದ್ವೇಷದ ಜ್ವಾಲಾಗ್ನಿ ವಿಧಾನಸಭೆಯಲ್ಲಿ ಹೊತ್ತಿ ಉರಿದದ್ದೂ ಇದೆ. ಆದ್ರೆ ಮುಖ್ಯಮತ್ರಿ ಸಿದ್ದರಾಮಯ್ಯ(Siddaramaiah) ಮತ್ತು ಬಿಜೆಪಿ ಶಾಸಕ ಅಶ್ವತ್ಥನಾರಾಯಣ ಮಧ್ಯೆ ಅಂಥಾ ವೈಯಕ್ತಿಕ ದ್ವೇಷವೇನಿಲ್ಲ. ಇರೋದು ರಾಜಕೀಯ ದ್ವೇಷ ಅಷ್ಟೇ. ಆ ರಾಜಕೀಯ ದ್ವೇಷದ ಮೊದಲ ಕಿಡಿ ಹೊತ್ತಿಕೊಂಡದ್ದು ಕಳೆದ ವರ್ಷ. ಬಿಜೆಪಿ(BJP) ಸಮಾವೇಶವೊಂದರಲ್ಲಿ ಮಾತಾಡ್ತಾ, ಟಿಪ್ಪು ಸುಲ್ತಾನನಂತೆ ಸಿದ್ದರಾಮಯ್ಯನವರನ್ನೂ ಹೊಡೆದು ಹಾಕ್ಬೇಕು ಅಂತ ಅಶ್ವತ್ಥನಾರಾಯಣ ಹೇಳಿದ್ರೆ, ಧಮ್ಮಿದ್ರೆ ತಾಕತ್ತಿದ್ರೆ ಹೊಡೆದು ಹಾಕ್ಲಿ ನೋಡೋಣ ಅಂತ ವಿಧಾನಸಭೆಯಲ್ಲೇ ಸವಾಲ್ ಹಾಕಿ ನಿಂತಿದ್ರು ಸಿದ್ದರಾಮಯ್ಯ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂಪಾಯಿಗಳ ಅಕ್ರಮ ಪ್ರಕರಣ ರಾಜ್ಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿ ಬಿಟ್ಟಿದೆ. ಹಗರಣದಲ್ಲಿ ಈಗಾಗ್ಲೇ ಮಾಜಿ ಸಚಿನ ಬಿ.ನಾಗೇಂದ್ರ ಅರೆಸ್ಟ್ ಆಗಿದ್ದು, ದೊಡ್ಡ ದೊಡ್ಡವರ ಬುಡದಲ್ಲೇ ಕಂಪನ ಶುರುವಾಗಿದೆ. 

ಇದನ್ನೂ ವೀಕ್ಷಿಸಿ: ಪೊಲೀಸರ ರಿಮ್ಯಾಂಡ್ ಅರ್ಜಿಯಲ್ಲಿ ಏನಿದೆ..? ದಾಸನಿಗೆ ಸದ್ಯಕಿಲ್ಲವಾ ಬಿಡುಗಡೆ ಭಾಗ್ಯ..?

Related Video