ವೈದ್ಯರಿಲ್ಲ, ಸಿಬ್ಬಂದಿಯಿಲ್ಲ ಆಪರೇಷನ್‌ ಮಾಡೋಕೆ ನೀರೂ ಇಲ್ಲ: ಅವ್ಯವಸ್ಥೆಗಳ ಕೂಪವಾಯ್ತಾ ಜಯದೇವ ಹೃದ್ರೋಗ ಆಸ್ಪತ್ರೆ ?

ತುರ್ತು ಬಳಕೆಗೆ ಬ್ಯಾರೆಲ್‌ಗಳಲ್ಲಿ ನೀರನ್ನು ಜಯದೇವ ಆಸ್ಪತ್ರೆ ಸಿಬ್ಬಂದಿ‌ ತುಂಬಿಟ್ಟಿದ್ದು, ವೈದ್ಯರು, ಸಿಬ್ಬಂದಿ, ನೀರು ಇಲ್ಲದ ಕಾರಣ ಆಪರೇಷನ್‌ ಮಾಡೋದನ್ನು ನಿಲ್ಲಿಸಲಾಗಿದೆ. 

First Published Jun 18, 2024, 9:17 AM IST | Last Updated Jun 18, 2024, 9:17 AM IST

ಕಲಬುರಗಿ: ಜಿಲ್ಲೆಯ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ(Jayadeva Hospital) ವೈದ್ಯರು, ಸಿಬ್ಬಂದಿ, ನೀರು ಇಲ್ಲದ ಕಾರಣ ಆಪರೇಷನ್‌(Operation) ಮಾಡೋದನ್ನು ನಿಲ್ಲಿಸಲಾಗಿದೆ. ನೀರಿಲ್ಲದ ಕಾರಣ ಶಸ್ತ್ರ ಚಿಕಿತ್ಸೆಯನ್ನು ಸ್ಥಗಿತ ಮಾಡಲಾಗಿದೆ. ಕಳೆದ ಮೂರು ದಿನಗಳಿಂದ ಕಲಬುರಗಿ ಜಯದೇವದಲ್ಲಿ ಹಾರ್ಟ್‌ ಆಪರೇಷನ್ (Heart operation) ಬಂದ್ ಮಾಡಲಾಗಿದೆ. ತುರ್ತು ಬಳಕೆಗೆ ಬ್ಯಾರೆಲ್‌ಗಳಲ್ಲಿ ನೀರನ್ನು ಜಯದೇವ ಆಸ್ಪತ್ರೆ ಸಿಬ್ಬಂದಿ‌ ತುಂಬಿಟ್ಟಿದ್ದಾರೆ. ಮಳೆ ಹಿನ್ನೆಲೆ ಮಣ್ಣು ಹಾಗೂ ಕೊಳಚೆ ಮಿಶ್ರಿತ ನೀರು ಸರಬರಾಜು ಮಾಡಲಾಗುತ್ತಿದೆಯಂತೆ. ಮಣ್ಣು ಮಿಶ್ರಿತ ನೀರು ಆಪರೇಷನ್ ಥೇಯಟರ್‌ಗೆ ಬಳಕೆ ಮಾಡೋಕೆ ಬರೋದಿಲ್ಲ. ಹೀಗಾಗಿ ಅತೀ ತುರ್ತು ಶಸ್ತ್ರ ಚಿಕಿತ್ಸೆ ಹೊರತುಪಡಿಸಿ ಉಳಿದ ಸರ್ಜರಿ ಬಂದ್ ಮಾಡಲಾಗಿದೆ. ಸದ್ಯದಲ್ಲೇ ಮಹಾನಗರ ಪಾಲಿಕೆ ನೀರಿನ ಸಮಸ್ಯೆ ಸರಿ ಮಾಡೋದಾಗಿ ಹೇಳಿದೆ ಎನ್ನುತ್ತೆ ಆಡಳಿತ ಮಂಡಳಿ. ಸದ್ಯದ್ರಲ್ಲೇ ಸಮಸ್ಯೆಗೆ ಪರಿಹಾರ ಕಲ್ಪಿಸುತ್ತೇವೆ. ಇದು ಒಂದೆರಡು ದಿ‌ನದ ಸಮಸ್ಯೆಯಷ್ಟೇ ಎನ್ನುತ್ತಾರೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ್.

ಇದನ್ನೂ ವೀಕ್ಷಿಸಿ:  Renukaswamy Murder Case: ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆ ಆಗಿತ್ತಾ ? ಈ ಬಗ್ಗೆ ಮಾಲೀಕ ಜಯಣ್ಣ ಹೇಳಿದ್ದೇನು?

Video Top Stories