Asianet Suvarna News Asianet Suvarna News

Renukaswamy Murder Case: ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆ ಆಗಿತ್ತಾ ? ಈ ಬಗ್ಗೆ ಮಾಲೀಕ ಜಯಣ್ಣ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು ಮೂರುವರೆ ಗಂಟೆ ಶೆಡ್‌ ಮಾಲೀಕ ಜಯಣ್ಣ ವಿಚಾರಣೆಯನ್ನು ಪೊಲೀಸರು ನಡೆಸಿದ್ದಾರೆ.

ಪಟ್ಟಣಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣಕ್ಕೆ(Renukaswamy murder case) ಸಂಬಂಧಿಸಿದಂತೆ ಮೂರುವರೆ ಗಂಟೆ ಶೆಡ್‌ ಮಾಲೀಕ ಜಯಣ್ಣ(Shed owner Jayanna) ವಿಚಾರಣೆ ನಡೆಸಲಾಗಿದೆ. ಪೊಲೀಸರ ಮುಂದೆ ಶೆಡ್ ಮಾಲೀಕರ ಹೇಳಿಕೆಯನ್ನು ದಾಖಲಿಸಲಾಗಿದೆ. ರೇಣುಕಾಸ್ವಾಮಿ ಮರ್ಡರ್ ಬಗ್ಗೆ ನಿಮಗೆ ಏನ್ ಗೊತ್ತು..? ನಿಮಗೆ ಮಾಹಿತಿ ಇಲ್ಲದೇ ಶೆಡ್‌ಗೆ ಹೇಗೆ ಬಂದ್ರು? ಹಿಂದೆ ಪಟ್ಟಣಗೆರೆ ಶೆಡ್‌ನಲ್ಲಿ ಈ ರೀತಿ ಘಟನೆಗಳು ಆಗಿದ್ವಾ..?, ಶೆಡ್‌ನಲ್ಲಿ ಹಲ್ಲೆ, ಕೊಲೆ(Murder) ನಡೆದರ ಬಗ್ಗೆ ನಿಮಗೆ ಮಾಹಿತಿ ಇತ್ತಾ? ಎಷ್ಟು ದಿನಕ್ಕೊಮ್ಮೆ ಬರ್ತಿದ್ರು..ಯಾರೆಲ್ಲಾ ಶೆಡ್‌ಗೆ ಬರ್ತಿದ್ರೂ, ದರ್ಶನ್ ನಿಮಗೆ ಹೇಗೆ ಪರಿಚಯ..ಯಾವಾಗಾದ್ರೂ ಬಂದಿದ್ರಾ? ಎಂಬ ಹಲವಾರು ಪ್ರಶ್ನೆಗಳನ್ನು ಕೇಳಲಾಗಿದೆ. ಈ ಬಗ್ಗೆ ಮಾತನಾಡಿದ ಅವರು, ಜಾಗದ ಓನರ್ ಆಗಿದ್ರಿಂದ ನನ್ನ ಕರೆದು ಪ್ರಶ್ನೆ ಮಾಡಿದ್ರು. ಪಟ್ಟಣಗೆರೆ ಶೆಡ್‌ನ ನಾನು ಬಾಡಿಗೆ ಕೊಟ್ಟಿದ್ದೇನೆ ಅಷ್ಟೇ ಎಂದು ಜಯಣ್ಣ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Today Horoscope: ಈ ರಾಶಿಯವರಿಗೆ ಇಂದು ಶತ್ರುಗಳ, ಸಾಲ ಬಾಧೆ ಕಾಡಲಿದ್ದು, ಪರಿಹಾರಕ್ಕೆ ಹೀಗೆ ಮಾಡಿ..

Video Top Stories