ಗುಜರಾತ್‌ನಲ್ಲಿ ಉಕ್ಕಿ ಹರಿಯುತ್ತಿರುವ ನದಿ..ಕೊಚ್ಚಿ ಹೋದ ಕಾರು, ಎಮ್ಮೆ, ಸಿಲಿಂಡರ್‌ಗಳು
ಗುಜಾರತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಹಲವಾರು ಭಾಗಗಳು ಮುಳುಗಿ ಹೋಗಿವೆ. ಅಲ್ಲದೇ ಪ್ರವಾಹಕ್ಕೆ ಕಾರುಗಳು, ಪ್ರಾಣಿಗಳು ತೇಲಿಕೊಂಡು ಹೋಗಿವೆ.
ಗುಜರಾತ್‌ನಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಪ್ರಳಯ ಸೃಷ್ಟಿಯಾಗಿದೆ. ಮಹಾಮಳೆಯ(Rain) ಅಬ್ಬರಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಕಾರುಗಳು, ಧನ, ಎಮ್ಮೆ, ಸಿಲಿಂಡರ್‌ಗಳು(Gas cylinder) ಕೊಚ್ಚಿ ಹೋಗಿವೆ. ಗುಜರಾತ್‌ನ(Gujarat) ಜುನಾಗಢ್ ಪ್ರದೇಶದಲ್ಲಿ ನವಸಾರಿಯ ಸೆಂಟ್ರಲ್ ಬ್ಯಾಂಕ್ ಪ್ರದೇಶ ಜಲಾವೃತವಾಗಿದೆ. ಮುಂದಿನ ಎರಡು ದಿನ ಇದೇ ರೀತಿ ಮಳೆಯಾಗಲಿದೆ ಹವಾಮಾನ ಇಲಾಖೆ ಸೂಚನೆ ನೀಡಿದೆ. ಇನ್ನೂ ವ್ಯಕ್ತಿಯೊಬ್ಬರು ನೀರಿನಲ್ಲಿ ತೇಲಿ ಹೋಗುತ್ತಿದ್ದ ಕಾರನ್ನು(Cars) ತಡೆಯಲು ಹೋಗಿ ಅವರೇ ಮುಳುಗಿ ಹೋಗಿದ್ದಾರೆ. ಅಲ್ಲದೇ ಜನಾಗಢ್ ಪ್ರದೇಶದಲ್ಲಿ ಗ್ಯಾಸ್ ಸಿಲಿಂಡರ್‌ಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಜುನಾಗಢ್‌ನ ಗಿರ್ನಾರ್ ಹಿಲ್‌ನಲ್ಲಿ ಸುಮಾರು 14 ಇಂಚುಗಳಷ್ಟು ಮಳೆಯಾಗಿದ್ದು, ಪರ್ವತಗಳ ಮೇಲಿಂದ ಹರಿದು ಬಂದ ನೀರು ನಗರದಲ್ಲಿ ಪ್ರವಾಹ ಸೃಷ್ಠಿಸಿದೆ.
ಇದನ್ನೂ ವೀಕ್ಷಿಸಿ: ಮಣಿಪುರ ಯುವತಿಗೆ ರ‍್ಯಾಪಿಡೋ ಬೈಕ್ ಚಾಲಕನಿಂದ ಆಶ್ಲೀಲ ಮೆಸೇಜ್: ನಿರ್ಜನ ಪ್ರದೇಶದಲ್ಲಿ ಲೈಂಗಿಕ ಕಿರುಕುಳ ಆರೋಪ