ಈ ದೇಶ ಉಳಿಯಬೇಕಿದ್ರೆ ನರೇಂದ್ರ ಮೋದಿ ಪ್ರಧಾನಿ ಆಗಬೇಕು ಅಷ್ಟೇ: ಹೆಚ್‌.ಡಿ.ರೇವಣ್ಣ

ಬಿಜೆಪಿ ಜೆಡಿಎಸ್ ಎರಡೂ ಪಕ್ಷ ಸೇರಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ವಿವೇಕಾನಂದ ನೂರಕ್ಕೆ ನೂರು ಚುನಾವಣೆಯಲ್ಲಿ ಗೆಲ್ಲುತ್ತಾರೆ ಎಂದು ಹೆಚ್‌.ಡಿ.ರೇವಣ್ಣ ಹೇಳಿದ್ದಾರೆ.

Share this Video
  • FB
  • Linkdin
  • Whatsapp

ಹಾಸನ: ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆ ವಿಚಾರವಾಗಿ ಹೊಳೆನರಸೀಪುರದಲ್ಲಿ‌ ಮಾಜಿ ಸಚಿವ ಹೆಚ್.ಡಿ.ರೇವಣ್ಣ(HD Revanna) ಮಾತನಾಡಿ, ನಮ್ಮ ಎಲ್ಲಾ ಶಾಸಕರುಗಳು ಚುನಾವಣೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಸ್ವಾತಂತ್ರ ಬಂದ ನಂತರ ಶಿಕ್ಷಣ ಕ್ಷೇತ್ರಕ್ಕೆ ಏನಾದ್ರು ಕೊಡುಗೆ ನೀಡಿದ್ರೆ ಅದು ಕುಮಾರಸ್ವಾಮಿ ಎಂದು ಹೆಚ್‌.ಡಿ.ರೇವಣ್ಣ ಹೇಳಿದ್ದಾರೆ. ಶಿಕ್ಷಣಕ್ಕೆ ಮೂಲಭೂತ ‌ಸೌಲಭ್ಯ, ಶಿಕ್ಷಕರ ನೇಮಕಾತಿ ಎಲ್ಲವನ್ನೂ ಮಾಡಿದ್ದಾರೆ. ಈ ಬಾರಿ ಬಿಜೆಪಿ(BJP) ಜೆಡಿಎಸ್ (JDS) ಎರಡೂ ಪಕ್ಷ ಸೇರಿ ಚುನಾವಣೆ ಎದುರಿಸುತ್ತಿದ್ದೇವೆ. ನಮ್ಮ ಅಭ್ಯರ್ಥಿ ವಿವೇಕಾನಂದ ನೂರಕ್ಕೆ ನೂರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಎಕ್ಸಿಟ್ ಪೋಲ್‌ ಬಗ್ಗೆ ನಾನು ಇವತ್ತು ಏನೂ‌ ಮಾತನಾಡೊಲ್ಲ. ಈ ದೇಶ ಉಳಿಯಬೇಕಿದ್ರೆ ಮೋದಿ ಪ್ರಧಾನಿ ಆಗಬೇಕು ಅಷ್ಟೇ. ಲಕ್ಷ್ಮೀ ನರಸಿಂಹ ಇರೋವರೆಗೂ ನಮಗೇನೂ ತೊಂದರೆ ಇಲ್ಲ‌ ನಡೀರಿ. ಜೆಡಿಎಸ್‌ ಸ್ಪರ್ಧಿಸಿರೋ ಮೂರೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನು ರೇವಣ್ಣ ವ್ಯಕ್ತಪಡಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: ಎಸ್ಐಟಿಯಿಂದ ಅರೆಸ್ಟ್ ಆಗ್ತಾರಾ ಭವಾನಿ ರೇವಣ್ಣ !? ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ನಾಪತ್ತೆ ಆದ್ರಾ ಭವಾನಿ?

Related Video