ಎಸ್ಐಟಿಯಿಂದ ಅರೆಸ್ಟ್ ಆಗ್ತಾರಾ ಭವಾನಿ ರೇವಣ್ಣ !? ನಿರೀಕ್ಷಣಾ ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ನಾಪತ್ತೆ ಆದ್ರಾ ಭವಾನಿ?

ತಲೆಮರೆಸಿಕೊಂಡೇ ಜಾಮಿನಿಗಾಗಿ ಹೈಕೋರ್ಟ್ ಮೆಟ್ಟಿಲೇರ್ತಾರಾ ಭವಾನಿ..!
ಸೆಷನ್ಸ್ ಕೋರ್ಟ್ ಕೊಟ್ಟ ಆದೇಶ ಪ್ರಶ್ನಿಸಿ ಹೈಕೋರ್ಟ್ ಅರ್ಜಿ ಸಲ್ಲಿಸಲು ಅವಕಾಶ
ಸೋಮವಾರ ಹೈಕೋರ್ಟ್ ನಿರೀಕ್ಷಣಾ ಜಾಮೀನು ಸಲ್ಲಿಸ್ತಾರಾ ಭವಾನಿ ರೇವಣ್ಣ..?

Share this Video
  • FB
  • Linkdin
  • Whatsapp

ಕೆ.ಆರ್.ನಗರ ಮಹಿಳೆ ಕಿಡ್ನ್ಯಾಪ್ ಆರೋಪ ಪ್ರಕರಣಕ್ಕೆ(KR Nagar woman kidnapping case) ಸಂಬಂಧಿಸಿದಂತೆ ಎಸ್ಐಟಿಯಿಂದ ಭವಾನಿ ರೇವಣ್ಣ(Bhavani Revanna) ಅರೆಸ್ಟ್ ಆಗುವ ಸಾಧ್ಯತೆ ಇದೆ. ನೋಟಿಸ್ ಕೊಟ್ರೂ ವಿಚಾರಣೆಗೆ ಭವಾನಿ ರೇವಣ್ಣ ಗೈರಾಗಿದ್ದಾರೆ. ನಿನ್ನೆ SIT ಇಡೀ ದಿನ ಕಾದರೂ ಭವಾನಿ ರೇವಣ್ಣ ಪತ್ತೆಯಿಲ್ಲ. ವಿಚಾರಣೆಗೆ ಗೈರಾದ ಭವಾನಿ ಅವರನ್ನ ಆರೆಸ್ಟ್ ಮಾಡುತ್ತಾ ಎಸ್ಐಟಿ..?, ವಿಚಾರಣೆಗೆ ಗೈರಾದ ಹಿನ್ನಲೆ ಹಲವೆಡೆ ಎಸ್ಐಟಿ(SIT) ಹುಡುಕಾಟ ನಡೆಸುತ್ತಿದೆ. ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ಮತ್ತೊಂದು ನೋಟಿಸ್ ಕೊಡುವ ಸಾಧ್ಯತೆ ಇದೆ. ಅನಾರೋಗ್ಯದಿಂದ ವಿಚಾರಣೆಗೆ ಗೈರು ಎಂದ ಭವಾನಿ ವಕೀಲರು. ಭವಾನಿ ರೇವಣ್ಣಗೆ ನಿಜಕ್ಕೂ ಅನಾರೋಗ್ಯಕ್ಕೆ ತುತ್ತಾಗಿದ್ದರಾ ಎಂಬ ಪ್ರಶ್ನೆ ಸಹ ಕಾಡತೊಡಗಿದೆ.

ಇದನ್ನೂ ವೀಕ್ಷಿಸಿ: ನನ್ನ ವಿರುದ್ಧ ಯಾರೋ ಆಗದೇ ಇರೋರು ರಾಜಕೀಯವಾಗಿ ಷಡ್ಯಂತ್ರ ಮಾಡಿದ್ದಾರೆ: ಪ್ರಜ್ವಲ್‌ ರೇವಣ್ಣ

Related Video