Asianet Suvarna News Asianet Suvarna News

ಸೂರಜ್ ರೇವಣ್ಣ ಮಹಾನ್ ದೈವ ಭಕ್ತ, ಅವ್ನು ಬಹಳ ಬೇಗ ಹೊರಬರುತ್ತಾನೆ: ಹೆಚ್ ಡಿ ರೇವಣ್ಣ

ನಾನು ಪ್ರಜ್ವಲ್ ಭೇಟಿಗೆ ಹೋಗಲ್ಲ. ಒಂದು ವೇಳೆ ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತಾ ಹೇಳುತ್ತಾರೆ‌ ಹೀಗಾಗಿ ನಾನು ಹೋಗಲ್ಲ. ಅಲ್ಲದೇ ಸೂರಜ್‌ ರೇವಣ್ಣ ಮಹಾನ್‌ ದೈವ ಭಕ್ತ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದ್ದಾರೆ.

ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ ಹೆಚ್‌ ಡಿ ರೇವಣ್ಣ, ನಾನು ಪ್ರಜ್ವಲ್(Prajwal revanna) ಭೇಟಿಗೆ ಹೋಗಲ್ಲ. ಒಂದು ವೇಳೆ ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೊಟ್ಟ ಅಂತಾ ಹೇಳುತ್ತಾರೆ‌ ಹೀಗಾಗಿ ನಾನು ಹೋಗಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣ(HD Revanna) ಹೇಳಿದ್ದಾರೆ. ನಿನ್ನೆ ನನ್ನ ಪತ್ನಿ ಹೋಗಿದ್ದಾರೆ, ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ. ಸೂರಜ್ ರೇವಣ್ಣ(Suraj Revanna) ಮಹಾನ್ ದೈವ ಭಕ್ತ. ಅವ್ನು ಬಹಳ ಬೇಗ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡೋಲ್ಲ.ಎಲ್ಲವೂ ನ್ಯಾಯಾಲಯದ ಮುಂದೆ ಇದೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಎಂಥೆಂತವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ‌. ಎಲ್ಲದಕ್ಕೂ ಕಾಲ ಉತ್ತರ ನೀಡಲಿದೆ ಎಂದರು. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದು ಮೈಸೂರಿನಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  ರಾಹುಲ್ ಮೊದಲ ಭಾಷಣದಲ್ಲೇ ವಿವಾದ ಸೃಷ್ಟಿಸಿಕೊಂಡ್ರಾ..? ಶಿವನ ಫೋಟೋ ಪ್ರದರ್ಶಿಸಿ ಬಿಜೆಪಿಗೆ ಅಹಿಂಸೆ ಪಾಠ..!

Video Top Stories