ರಾಹುಲ್ ಮೊದಲ ಭಾಷಣದಲ್ಲೇ ವಿವಾದ ಸೃಷ್ಟಿಸಿಕೊಂಡ್ರಾ..? ಶಿವನ ಫೋಟೋ ಪ್ರದರ್ಶಿಸಿ ಬಿಜೆಪಿಗೆ ಅಹಿಂಸೆ ಪಾಠ..!

ಲೋಕಸಭೆಯಲ್ಲಿ ಮೋದಿ ರಾಹುಲ್ ಮಧ್ಯೆ ಹಿಂದುತ್ವದ ಯುದ್ಧ..! 
ಈಶ್ವರ, ಜೀಸಸ್ ಫೋಟೋ ಪ್ರದರ್ಶಿಸಿದ್ದೇಕೆ ರಾಹುಲ್ ಗಾಂಧಿ..?
ತುರ್ತು ಪರಿಸ್ಥಿತಿ, ಸಿಖ್ ದಂಗೆಯನ್ನು ನೆನಪಿಸಿದ ಅಮಿತ್ ಶಾ..!

First Published Jul 2, 2024, 5:28 PM IST | Last Updated Jul 2, 2024, 5:29 PM IST

ಲೋಕಸಭೆಯಲ್ಲಿ ಮೋದಿ(Narendra Modi) ರಾಹುಲ್ ಮಧ್ಯೆ ಹಿಂದುತ್ವದ ಯುದ್ಧ ನಡೆದಿದೆ. ಈಶ್ವರ(Ishwara), ಜೀಸಸ್(Jesus) ಫೋಟೋವನ್ನು ಸದನದಲ್ಲಿ ರಾಹುಲ್‌ ಗಾಂಧಿ ಪ್ರದರ್ಶಿಸಿದ್ದಾರೆ. ರಾಹುಲ್ ಗಾಂಧಿ (Rahul ghandhi) ಅಹಿಂಸಾ ಬಗ್ಗೆ ಕೊಟ್ಟ ಉಪದೇಶಕ್ಕೆ ಚಾಣಾಕ್ಯ ಅಮಿತ್ ಶಾ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್‌ನ ಕರಾಳಿ ಇತಿಹಾಸವನ್ನೇ ಮರೆತಿದ್ದ ರಾಹುಲ್ ಗಾಂಧಿಗೆ ಅಮಿತ್ ಶಾ  ಕಾಂಗ್ರೆಸ್‌ನ ಕರಾಳ ಸತ್ಯ ಬಿಚ್ಚಿಟ್ಟಿದ್ದಾರೆ. ರಾಹುಲ್ ಗಾಂಧಿ ಅಧಿವೇಶನದಲ್ಲಿ ಯಾವಾಗ ಎಲ್ಲಾ ಧರ್ಮಗಳ ಫೋಟೋ ಪ್ರದರ್ಶನ ಮಾಡಿದ್ರೋ, ಆಗಲೇ ಅಮಿತ್ ಶಾ ಕಾಂಗ್ರೆಸ್‌ನ ಕರಾಳ ಇತಿಹಾಸವನ್ನ ನೆನಪಿಸಿದ್ರು. ಇದೀಷ್ಟೆ ಅಲ್ಲದೇ, ಅಗ್ನೀವೀರ್ ಬಗ್ಗೆಯೂ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅಧಿವೇಷನದಲ್ಲಿ ಧರ್ಮಯುದ್ಧಕ್ಕೆ ನಾಂದಿ ಹಾಡಿದ್ದಾರೆ. ಇದೀಷ್ಟೆ ಅಲ್ಲದೇ ಲಕ್ಷ ಲಕ್ಷ ಯುವಕರಿಗೆ ಉಪಯೋಗವಾಗ್ತಿರೋ ಅಗ್ನೀವೀರ ಯೋಜನೆ ಬಗ್ಗೆಯೂ ಪ್ರಸ್ತಾಪಿಸಿದ್ರು. 

ಇದನ್ನೂ ವೀಕ್ಷಿಸಿ:  ಅವಳು ಟಾಪ್‌-ಪ್ಯಾಂಟೂ ಹಾಕಿದ್ದೇ ತಪ್ಪಾಯ್ತಾ..? 17 ವರ್ಷದ ಸಂಸಾರದಲ್ಲಿ ಎಷ್ಟೆಲ್ಲಾ ನಡೆದುಬಿಟ್ಟಿತ್ತು..!