ಮಂಡ್ಯ ಹೋರಾಟ ರಾಜಕೀಯ ಲೆಕ್ಕಾಚಾರ..! ಹಿಂದುತ್ವದ ಮೂಲಕ ಎಂಟ್ರಿ ಕೊಡಲು ಕುಮಾರಸ್ವಾಮಿ ಸಜ್ಜು..?
ಕೇಸರಿ ಶಾಲು ಧರಿಸಿ ಹನುಮ ಧ್ವಜ ಹೋರಾಟದಲ್ಲಿ ಎಚ್‌ಡಿಕೆ..!
ಕಾಂಗ್ರೆಸ್ ವಿರುದ್ಧ ಅಬ್ಬರಿಸಿದ ಬೊಬ್ಬರಿಸಿದ ಮೈತ್ರಿ ನಾಯಕರು..!
ಅದೇ ಸ್ಥಳದಲ್ಲಿ ಹನುಮ ಧ್ವಜಾರೋಹಣಕ್ಕಾಗಿ ಡಿಸಿಗೆ ಮನವಿ ಪತ್ರ
ಲೋಕಸಭಾ ಚುನಾವಣಾ ಹೊತ್ತಲ್ಲಿ ಬಿಜೆಪಿ(BJP)-ಜೆಡಿಎಸ್(JDS) ಮೈತ್ರಿ ನಾಯಕರು ಹನುಮ ಧ್ವಜ(Hanuma flag) ಅಸ್ತ್ರವನ್ನು ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ನಿನ್ನೆ ಮಂಡ್ಯದಲ್ಲಿ(Mandya) ನಡೆದ ಬಿಜೆಪಿ ಪ್ರತಿಭಟನೆಯಲ್ಲಿ ದಳಪತಿಗಳು ಭಾಗಿಯಾಗೋ ಮೂಲಕ ಮೈತ್ರಿಯನ್ನು ಇನ್ನಷ್ಟು ಗಟ್ಟಿ ಮಾಡಿಕೊಂಡಿದ್ದಾರೆ. ಒಕ್ಕಲಿಗರ ಕೋಟೆಯಲ್ಲಿ ಮೈತ್ರಿ ನಾಯಕರು ಮೊದಲ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬಿಜೆಪಿ ನಾಯಕರೊಂದಿಗೆ ಮಂಡ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹನುಮ ಧ್ವಜ ಬಿಜೆಪಿ ಮತ್ತು ಜೆಡಿಎಸ್ ನಾಯಕರ ದೋಸ್ತಿಯನ್ನು ಗಟ್ಟಿ ಮಾಡಿದೆ. ಬಿಜೆಪಿಗೆ ಮೋದಿ ಬೆಂಬಲಿಸುವ ಮತಗಳು ಬರಬೇಕಾಗಿರುವುದು ಅನಿವಾರ್ಯವಾಗಿದೆ. ಹೀಗಾಗಿ ಈ ಕಾರಣಕ್ಕೆ ಕೇಸರಿ ಶಾಲನ್ನು ಕುಮಾರಸ್ವಾಮಿ ಹಾಕಿದ್ದಾರೆ ಎನ್ನಲಾಗ್ತಿದೆ.
ಇದನ್ನೂ ವೀಕ್ಷಿಸಿ: ಮಂಡ್ಯದ ಹನುಮ ಧ್ವಜದ ಹಿಂದಿದೆ ರೋಚಕ ಕತೆ, ತಪ್ಪು ಯಾರದ್ದು?