ಮಂಡ್ಯದ ಹನುಮ ಧ್ವಜದ ಹಿಂದಿದೆ ರೋಚಕ ಕತೆ, ತಪ್ಪು ಯಾರದ್ದು?
ಕೆರಗೋಡು ಹನುಮಧ್ವಜ ಪ್ರಕರಣ, ಪಿಡಿಒ ಅಮಾನತು ಮಾಡಿ ಆದೇಶ, ಮಂಡ್ಯ ಬಂದ್ ಘೋಷಣೆ, ಮಂಡ್ಯದಲ್ಲಿ ಬಿಗುವಿನ ವಾತಾವರಣ ನಿರ್ಮಾಣ, ರಾಷ್ಟ್ರಪತಿಗೆ ಅಗೌರವ ತೋರಿ ನಮ್ಮದು ಹಳ್ಳಿ ಭಾಷೆ ಎಂದರ ಮುಗೀತಾ? ಸಿದ್ದರಾಮಯ್ಯಗೆ ಬಿಜೆಪಿ ಪ್ರಶ್ನೆ ಸೇರಿದಂತೆ ಇಂದಿನ ಇಡೀ ದಿನದ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.
ಮಂಡ್ಯದ ಕೆರಗೋಡಿನಲ್ಲಿ ಹಾರಿಸಿದ್ದ ಹನುಮಧ್ವಜವನ್ನು ಪೊಲೀಸ್ ಭದ್ರತೆಯೊಂದಿಗೆ ತೆಗೆದ ಜಿಲ್ಲಾಡಳಿತ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಆದರೆ ಇದು ಭಾರಿ ವಿವಾದಕ್ಕೆ ಕಾರಣವಾಗಿದ್ದು, ಲಾಠಿ ಚಾರ್ಜ್ ನಡೆದಿದೆ. ಅಖಾಡಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಎಂಟ್ರಿಕೊಟ್ಟಿದೆ. ಮಂಢ್ಯ ಬಂದ್ ಘೋಷಿಸಲಾಗಿದೆ. ರಾಜಕೀಯ ಹೋರಾಟಕ್ಕೆ ಮಂಡ್ಯ ವೇದಿಕೆಯಾಗಿದೆ. ಈ ಹನುಮ ಧ್ವಜ ಹಿಂದೆ ರೋಚಕ ಕತೆಯೊಂದಿದೆ. ಹನುಮಧ್ವಜಕ್ಕೆ ಗ್ರಾಮಸ್ಥರೇ ದುಡ್ಡ ಸಂಗ್ರಹಿಸಿದ್ದಾರೆ.ಆದರೆ ಏಕಾಏಕಿ ಸರ್ಕಾರ ಮಧ್ಯಪ್ರವೇಶಿಸಿದ್ದು ಏಕೆ? ಅಷ್ಟಕ್ಕೂ ಹನುಮಧ್ವಜ ವಿವಾದಕ್ಕೆ ಕಾರಣವೇನು?