ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ್ ದರ್ಪ: ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಬಂದ ಕೈ MLA
ನೇಮಿರಾಜ್ ಹಾಗೂ ಭೀಮಾನಾಯ್ಕ್ ಮಧ್ಯೆ ವಾಗ್ವಾದ| ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಘಟನೆ| ಜನರ ಮುಂದೆಯೇ ಹೊಡೆದಾಟಕ್ಕೆ ಇಳಿದ ಶಾಸಕ ಭೀಮಾನಾಯ್ಕ್|
ಬಳ್ಳಾರಿ(ನ.08): ಪಟ್ಟಣ ಪಂಚಾಯತ್ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕ ಭೀಮಾನಾಯ್ಕ್ ದರ್ಪ ತೋರಿದ ಘಟನೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದಿದೆ. ಶಾಸಕ ಭೀಮಾನಾಯ್ಕ್ ಜನರ ಮುಂದೆಯೇ ಹೊಡೆದಾಟಕ್ಕೆ ಇಳಿದಿದ್ದಾರೆ.
ಯೋಗೀಶ್ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆ ವೇಳೆ ಒಂದೊಂದೆ ನಿಗೂಢ ಸತ್ಯ ಬಯಲು..!
ಮಾಜಿ ಶಾಸಕ ನೇಮಿರಾಜ್ ಹಾಗೂ ಹಾಲಿ ಶಾಸಕ ಭೀಮಾನಾಯ್ಕ್ ಮಧ್ಯೆ ವಾಗ್ವಾದ ನಡೆದಿದೆ. ಶಾಸಕ ಭೀಮಾನಾಯ್ಕ್ ತೊಡೆ ತಟ್ಟಿ, ತೋಳೇರಿಸಿ ಜಗಳಕ್ಕೆ ಇಳಿದಿದ್ದಾರೆ. ಕೊನೆ ಘಳಿಗೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿವೆ.