Asianet Suvarna News Asianet Suvarna News

ಯೋಗೀಶ್‌ ಗೌಡ ಹತ್ಯೆ ಪ್ರಕರಣ: ಸಿಬಿಐ ತನಿಖೆ ವೇಳೆ ಒಂದೊಂದೆ ನಿಗೂಢ ಸತ್ಯ ಬಯಲು..!

ಸಿಬಿಐ ವಶದಲ್ಲಿರುವ ವಿನಯ್‌ ಕುಲಕರ್ಣಿ, ವಿಜಯ್‌ ಕುಲಕರ್ಣಿ, ಬಸವರಾಜ್‌ ಮುತ್ತಿಗಿ, ಸೋಮು ನ್ಯಾಮಗೌಡ ಹಾಗೂ ಚಂದ್ರು ಗಿಂಡಿಗೆ| ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ ಸಿಬಿಐ ಅಧಿಕಾರಿಗಳು| ಕೊಲೆಗೂ ಮುನ್ನ ನಡೆದ ಪ್ಲಾನ್‌ ಸುಪಾರಿ ಹಂತಕರ ಭೇಟಿ ಬಗ್ಗೆ ಮಾಹಿತಿ ಲಭ್ಯ| 

ಹುಬ್ಬಳ್ಳಿ(ನ.08): ಜಿಲ್ಲಾ ಪಂಚಾಯತ್‌ ಸದಸ್ಯ ಯೋಗೀಶ್‌ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್‌ ಕುಲಕರ್ಣಿ ಅವರ ತಂಡವನ್ನ ಸಿಬಿಐ ವಿಚಾರಣೆ ನಡೆಸುತ್ತಿದೆ. ಈಗಾಗಲೇ ಸಿಬಿಐ ವಶದಲ್ಲಿರುವ ವಿನಯ್‌ ಕುಲಕರ್ಣಿ ಸೇರಿದಂತೆ ವಿಜಯ್‌ ಕುಲಕರ್ಣಿ, ಬಸವರಾಜ್‌ ಮುತ್ತಿಗಿ, ಸೋಮು ನ್ಯಾಮಗೌಡ ಹಾಗೂ ಚಂದ್ರು ಗಿಂಡಿಗೆ ಸಿಬಿಐ ಅಧಿಕಾರಿಗಳು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

ಸಿಎಂ ಸ್ವಕ್ಷೇತ್ರದಲ್ಲಿ ನೋಡಲಾರದ ಅನಾಚಾರ: ಸರ್ಕಾರಿ ನೌಕರರಿಂದ ಅರೆಬೆತ್ತಲೆ ಡ್ಯಾನ್ಸ್‌..!

ಸಿಬಿಐ ತನಿಖೆ ವೇಳೆ ಒಂದೊಂದೆ ಸತ್ಯಗಳು ಬಯಲಾಗುತ್ತಿವೆ. ಹೀಗಾಗಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನ ಮತ್ತಷ್ಟು ಚುರುಕುಗೊಳಿಸಿದ್ದಾರೆ. ಕೊಲೆಗೂ ಮುನ್ನ ನಡೆದ ಪ್ಲಾನ್‌ ಸುಪಾರಿ ಹಂತಕರ ಭೇಟಿ ಬಗ್ಗೆ ಮಾಹಿತಿ ಲಭ್ಯವಾಗಿದೆ.