Asianet Suvarna News Asianet Suvarna News

ಪಾಠ ಪ್ರವಚನ ಬಿಟ್ಟು ಬಹಿಷ್ಕಾರಕ್ಕೆ ಇಳಿದ ಅತಿಥಿ ಉಪನ್ಯಾಸಕರು: ಬೆಳಗಾವಿ ಅಧಿವೇಶನದಲ್ಲಿ ಹೋರಾಟ

ವಿರೋಧ‌ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಕೂಡ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡೋ ಬಗ್ಗೆ ಭರವಸೆ ನೀಡಿದ್ರು. ಇದೀಗ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲೇ ತಮ್ಮ ಸೇವೆ ಖಾಯಂಗೊಳಿಸುವ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿ ಒತ್ತಡ ಹೇರುತ್ತಿರುವ ಅತಿಥಿ ಉಪನ್ಯಾಸಕರು 

ಬೆಳಗಾವಿ(ಡಿ.03):  ಅತಿಥಿ ಉಪನ್ಯಾಸಕರು ಬೀದಿಯಲ್ಲಿ ಹೋರಾಟ ಮಾಡುತ್ತಿದ್ರೆ, ವಿದ್ಯಾರ್ಥಿಗಳು ಮಾತ್ರ ಪಾಠ ಪ್ರವಚನವಿಲ್ಲದೇ ಪರದಾಟ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಸೇವೆ ಖಾಯಂ ಗೊಳಿಸಬೇಕೆಂದು ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಕಳೆದೊಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟು ದಿನ ಆಯಾ ಕಾಲೇಜು ಮುಂದೆ ಹೋರಾಟ ಮಾಡಿದ್ದಾಯ್ತು. ಇದೀಗ ಬೆಳಗಾವಿ ಅಧಿವೇಶನದಲ್ಲಿ ಹೋರಾಟ ಮಾಡಲು ಸಿದ್ಧತೆ ನಡೆಸಿದ್ದಾರೆ.  

ಹೀಗೆ ಪ್ರತಿಭಟನೆಗೆ ಕುಳಿತ ಇವರೆಲ್ಲ ಅತಿಥಿ ಉಪನ್ಯಾಸಕರು.. ಕಳೆದೊಂದು ವಾರದಿಂದ ಪಾಠ ಬಿಟ್ಟು ಹೋರಾಟಕ್ಕೆ ಇಳಿದಿದ್ದಾರೆ.. ಹಾಗಂತ ಹತ್ತೊ ಇಪ್ಪತ್ತೋ ಮಂದಿಯಲ್ಲ. ರಾಜ್ಯದ ಹತ್ತು ಸಾವಿರಕ್ಕೂ ಹೆಚ್ಚು ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಪ್ರತಿಭಟನೆ ಹಾದಿ ಹಿಡಿದಿದ್ದಾರೆ. ಕಳೆದ 10 ರಿಂದ 15 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರೋ‌ ಇವರೆಲ್ಲ ಕಡಿಮೆ ಸಂಬಳ ಪಡೀತಿದ್ದಾರೆ.. ಸರ್ಕಾರಿ ಉಪನ್ಯಾಸಕರು ಎಷ್ಟು ಕೆಲಸ ಮಾಡ್ತಾರೋ ಅದಕ್ಕಿಂತ ಹೆಚ್ಚ ಕೆಲಸ ಮಾಡಿದ್ರೂ ಪಡಿಯೋದು ಮಾತ್ರ ಕಡಿಮೆ ಸಂಬಳ.. ಅದು ಕೂಡ ತಿಂಗಳ ಸಂಬಳ ತಿಂಗಳಿಗೆ ಸರಿಯಾಗಿ ಬರಲ್ಲ. ಆದ್ರೂ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದೆಂದು ಪಾಠ ಮಾಡೋದು ನಿಲ್ಲಿಸಿಲ್ಲ... ಈಗ ತಮ್ಮ ಸೇವೆಯನ್ನು ಖಾಯಂಗೊಳಿಸುವಂತೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ.

ಡಯಾಲಿಸಿಸ್ ಸಮಸ್ಯೆ ನಮ್ಮ ಸರ್ಕಾರದಿಂದ ಆಗಿದ್ದಲ್ಲ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ರಾಜ್ಯದಲ್ಲಿ 10ಸಾವಿರ 500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರಿದ್ದಾರೆ. ಇವರನ್ನೇ ನಂಬಿ ರಾಜ್ಯದಲ್ಲಿ ಐದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ. ಹೀಗೆ ವಾರಗಟ್ಟಲೇ ಪಾಠ ಮಾಡದೇ ಇದ್ರೇ ವಿದ್ಯಾರ್ಥಿಗಳ ಪರಿಸ್ಥಿತಿ ಹೇಗೆ ಅನ್ನೋದು ಸದ್ಯದ ಪ್ರಶ್ನೆಯಾಗಿದೆ. ಕಳೆದೊಂದು ವಾರದಿಂದ ಆಯಾ ಕಾಲೇಜುಗಳ ಮುಂದೆ ಪ್ರತಿಭಟನೆ ಮಾಡಿದ್ದಾಯ್ತು. ಸೋಮವಾರದಿಂದ ಬೆಳಗಾವಿಯಲ್ಲಿ ಅಧಿವೇಶನ ಇರೋ ಹಿನ್ನೆಲೆ ರಾಜ್ಯದ ಎಲ್ಲ ಅತಿಥಿ ಉಪನ್ಯಾಸಕರು ಬೆಳಗಾವಿಯಲ್ಲಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಿದ್ದಾರೆ. ಇನ್ನು ಉಪನ್ಯಾಸಕರ ಬೇಡಿಕೆ ಈಡೇರಿಸುವಂತೆ ವಿದ್ಯಾರ್ಥಿಗಳು ಕೂಡ ಹೋರಾಟಕ್ಕೆ ಸಾಥ್ ಕೊಟ್ಟಿದ್ದಾರೆ.

ವಿರೋಧ‌ ಪಕ್ಷದ ನಾಯಕರಾಗಿದ್ದಾಗ ಸಿದ್ದರಾಮಯ್ಯ ಕೂಡ ಅತಿಥಿ ಉಪನ್ಯಾಸಕರನ್ನು ಖಾಯಂ ಮಾಡೋ ಬಗ್ಗೆ ಭರವಸೆ ನೀಡಿದ್ರು. ಇದೀಗ ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ಹೀಗಾಗಿ ಬೆಳಗಾವಿ ಅಧಿವೇಶನದಲ್ಲೇ ತಮ್ಮ ಸೇವೆ ಖಾಯಂಗೊಳಿಸುವ ನಿರ್ಧಾರ ಕೈಗೊಳ್ಳುವಂತೆ ಒತ್ತಾಯಿಸಿ ಅತಿತೀ ಉಪನ್ಯಾಸಕರು ಒತ್ತಡ ಹೇರುತ್ತಿದ್ದಾರೆ. 

Video Top Stories