Dharwad: ಕಾಮಗಾರಿ ಓಕೆ, ತೆರಿಗೆ ಕಟ್ಟಲ್ಲ ಯಾಕೆ?: ಟ್ಯಾಕ್ಸ್‌ ಕಟ್ಟದ ಕಂಪನಿಗೆ ಗ್ರಾಪಂ ನೋಟಿಸ್

*  ತೆರಿಗೆಗಾಗಿ ಹಠ ಬಿಡದ ಗ್ರಾಮ ಪಂಚಾಯತಿ ಪಿಡಿಓ
*  ನೋಟಿಸ್ ಜಾರಿ  ಮಾಡಿದ್ರೂ ತೆರಿಗೆ ಕಟ್ಟದೆ ಕಾಮಗಾರಿ
*  ಆಯುಕ್ತರಿಂದ ವಿಚಾರಣೆ ಮಾಡಿ ಕ್ರಮ ಕೈಗೊಳ್ಳುವ ಭರವಸೆ
 

First Published Feb 12, 2022, 12:59 PM IST | Last Updated Feb 12, 2022, 12:59 PM IST

ಧಾರವಾಡ(ಫೆ.12):  ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ಕೊಟ್ಟು ತರಾಟೆಗೆ ತೆಗೆದುಕ್ಕೊಳ್ಳುತ್ತಿರುವ ಗ್ರಾಮಸ್ಥರು. ಇದೆಲ್ಲ ನಡಿತಾ ಇರೋದು ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದಲ್ಲಿ. ಗ್ರಾಮ ಪಂಚಾಯತಿ ಪಿಡಿಓನಿಂದ ಎಲ್ ಆ್ಯಂಡ್‌ ಟಿ‌ ಕಂಪನಿಗೆ ನೋಟಿಸ್ ಜಾರಿಯಾಗಿದೆ. ನೋಟಿಸ್ ಜಾರಿ ಯಾಗಿ ಮೂರು ತಿಂಗಳು ಕಳೆದ್ರೂ ತೆರಿಗೆ ಕಟ್ಟದೆ, ಎಲ್ ಆ್ಯಂಡ್‌ ಟಿ ಕಂಪನಿ ಕೆಲಸವನ್ನ‌ ಮಾಡುತ್ತಿದೆ. 

ಸವದತ್ತಿಯಿಂದ ಧಾರವಾಡದವರೆಗೆ ನಡೆಯುತ್ತಿರುವ 24x7 ಕುಡಿಯುವ ನೀರಿನ ಕಾಮಗಾರಿ ಇದಾಗಿದೆ. ಇನ್ನು ಪಂಚಾಯತ ರಾಜ್ಯ ಕಾಯ್ದೆ 1993 ರ 66 ಎ ಮತ್ತು 66 ಬಿ ಅಧಿನಿಯಮದಡಿಯಲ್ಲಿ ನೋಟಿಸ್ ಜಾರಿ  ಮಾಡಿದ್ರೂ, ಪಂಚಾಯತಿಗೆ ತೆರಿಗೆ ಕಟ್ಟದೆ ಕೆಲಸವನ್ನ ಮಾಡುತ್ತಿದ್ದಾರೆ‌. ಗ್ರಾಮ ಪಂಚಾಯತಿಯ 47,348.220 ಚದರ ಮಿಟರ್ ಜಾಗವನ್ನ ಬಳಕೆ ಮಾಡಿಕೊಂಡ ಎಲ್ ಆ್ಯಂಡ್‌ ಟಿ ಕಂಪನಿ 2 ಕೋಟಿ 72 ಲಕ್ಷದ 25 ಸಾವಿರದ 226 ರೂಪಾಯಿ 50 ಪೈಸೆ ಟ್ಯಾಕ್ಸ್ ಕಟ್ಟಬೇಕಿದೆ.  ಹಾರೋಬೆಳವಡಿ ಗ್ರಾಮ ಪಂಚಾಯತಿ ಪಿಡಿಓ ಅವರಿಂದ 13 ಅಕ್ಟೋಬರ್ 2021ರಂದು ನೋಟಿಸ್ ಜಾರಿಯಾಗಿದೆ. ಇನ್ನು ಕಾಮಗಾರಿ ಕಳಪೆಯಾಗುತ್ತಿದೆ ಎಂದು ತಾ ಪಂ ಮಾಜಿ ಆಧ್ಯಕ್ಷ ಈರಣ್ಣ ಏಣಗಿ ಆರೋಪವನ್ನ ಮಾಡಿದ್ದಾರೆ.

Hijab Row: ಮೌನವಾಗಿರುವಂತೆ ಡಿಕೆಶಿ ಸೂಚನೆ, ಪರ ಮಾತನಾಡುವಂತೆ ಸಿದ್ದರಾಮಯ್ಯ ಸಲಹೆ

ನೋಟಿಸ್ ನೀಡಿ 7 ದಿನಗಳೊಳಗಾಗಿ ಪಂಚಾಯತಿ ಟ್ಯಾಕ್ಸ್ ಕಟ್ಟಬೇಕು ಎಂದು ನೋಟಿಸ್ ಜಾರಿಯಾದ್ರು ಇನ್ನುವೆರೆಗೂ ಟ್ಯಾಕ್ಸ್ ಕಟ್ಟದೆ ಕೆಲಸವನ್ನ ಆರಂಭಿಸಿದ್ದಾರೆ. ಬರೊಬ್ಬರಿ 760 ಕೋಟಿ ಪ್ರೊಜೆಕ್ಟ್‌ ಕಾಮಗಾರಿ ಕಳೆದ 8 ತಿಂಗಳಿಂದ ಆರಂಭವಾಗಿದ್ದು, ಇನ್ನು ಐದು ವರ್ಷ ನಡೆಯಲಿದೆ. ಅವಳಿ ನಗರ ಸೇರಿದಂತೆ ಧಾರವಾಡ ಜಿಲ್ಲೆಗೆ ಪ್ರತಿ ಮನೆ ಮನೆಗೆ ದಿನದ 24 ಗಂಟೆ ಕುಡಿಯುವ ನೀರಿನ ಯೋಜನೆಯನ್ನ ಜಾರಿಗೆ ತಂದಿದೆ. 2023 ಕ್ಕೆ ಇದನ್ನ ಕಂಪ್ಲೀಟ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇನ್ನು ತೆರಿಗೆಯನ್ನ ಕಟ್ಟಬೇಕು ಎಂಬ ವಿಚಾರವಾಗಿ ಪಾಲಿಕೆ‌ ಕಮಿಷನರ್ ಗೋಪಾಲಕೃಷ್ಣ ಅವರನ್ನ ಕೇಳಿದ್ರೆ ನಾನು ಈಗತಾನೆ ಅಧಿಕಾರವನ್ನ ವಹಿಸಿಕ್ಕೊಂಡಿದ್ದೆನೆ, ಆದಷ್ಟೂ ಬೇಗ ನಾನು ತೆರಿಗೆ ಕಟ್ಟೋದರ ಬಗ್ಗೆ ವಿಚಾರ ಮಾಡಿ, ಒಂದು ವೇಳೆ ಕಟ್ಟಲೆಬೇಕು ಎಂದು ಆದೇಶ ವಿದ್ರೆ ಅದನ್ನ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳಾಗಿ ನಾವು ಕಟ್ಟಿಸಲೆಬೇಕಾಗುತ್ತದೆ. ಆದಷ್ಟೂ ಬೇಗ ನಾನು ವಿಚಾರಣೆ ಮಾಡಿ ಕ್ರಮ ಕೈಗೊಳ್ಳುತ್ತೆನೆ ಅಂತಾರೆ ಕಮಿಷನರ್. 
 

Video Top Stories