Asianet Suvarna News Asianet Suvarna News

ಕೋಮು ದ್ವೇಷಕ್ಕೆ ಬಲಿಯಾದ ಕುಟುಂಬಸ್ಥರಿಗೆ ಪರಿಹಾರ: ನಾಲ್ಕು ಕುಟುಂಬ ಸೇರಿ 1 ಕೋಟಿ ಕೊಟ್ಟ ಸಿದ್ದು ಸರ್ಕಾರ

ಸಿಎಂ ಸಿದ್ದರಾಮಯ್ಯ ಸರ್ಕಾರ ಮಂಗಳೂರಿನಲ್ಲಿ ಕೋಮು ದ್ವೇಷಕ್ಕೆ ಬಲಿಯಾದ ನಾಲ್ಕು ಜನರಿಗೆ ಪರಿಹಾರವನ್ನು ಘೋಷಿಸಿದೆ.
 

First Published Jun 17, 2023, 10:17 AM IST | Last Updated Jun 17, 2023, 10:17 AM IST

ಮಂಗಳೂರು: ಕೋಮು ದ್ವೇಷಕ್ಕೆ ಬಲಿಯಾದ ಮಸೂದ್, ಮುಹಮ್ಮದ್‌ ಫಾಝಿಲ್‌, ಅಬ್ದುಲ್‌ ಜಲೀಲ್‌, ಕಾಳಿ ಪಳ್ಯದ ದೀಪಕ್‌ ರಾವ್‌ ಅವರಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇವರುಗಳು ಮತೀಯ ದುಷ್ಕರ್ಮಿಗಳಿಂದ ಕೊಲೆಯಾಗಿದ್ದರು. ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಸರ್ಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿದ್ದರು. ಜೂ. 19 ರಂದು ಪರಿಹಾರದ ಚೆಕ್‌ ಪಡೆಯುವಂತೆ ಸೂಚಿಸಲಾಗಿದೆ. 

ಇದನ್ನೂ ವೀಕ್ಷಿಸಿ: ಮಲ್ಲೇಶ್ವರಂನಲ್ಲಿ ಮೆಗಾ ಎಜುಕೇಷನ್‌ ಎಕ್ಸ್‌ ಪೋ: ಕೋರ್ಸ್‌ ಆಯ್ಕೆ, ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ಲಭ್ಯ

Video Top Stories