Asianet Suvarna News Asianet Suvarna News

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ವಿಸ್ತರಣೆ: ತಾಲೂಕಿನ 28 ಗ್ರಾಮಗಳಿಗೆ ಬುಡಾ ನೋಟಿಸ್ !

ಅವರು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪ್ರಭಾವಿ ಸಚಿವರು. ಆ ಸಚಿವರು ಪ್ರತಿನಿಧಿಸುವ ಕ್ಷೇತ್ರದ 28 ಗ್ರಾಮಗಳ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಅನ್ನದಾತರ ಈ ಆತಂಕಕ್ಕೆ ಕಾರಣ ಬುಡಾ ಜಾರಿಗೊಳಿಸಿರುವ ಆ ಒಂದು ನೋಟಿಸ್. ಬುಡಾದ ನೋಟಿಸ್ ಕೈ ಸೇರುತ್ತಿದ್ದಂತೆ ಆ ಗ್ರಾಮಗಳ ರೈತರು ಹೌಹಾರಿದ್ದಾರೆ.
 

ಸತೀಶ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್ ಇಬ್ಬರೂ ಬೆಳಗಾವಿ(Belgaum) ಜಿಲ್ಲೆಯ ಪ್ರಭಾವಿ ನಾಯಕರು. ಸಿದ್ದರಾಮಯ್ಯ(Siddaramaiah) ನೇತೃತ್ವದ ಸರ್ಕಾರದಲ್ಲಿ ಸತೀಶ ಜಾರಕಿಹೊಳಿ ಲೋಕೋಪಯೋಗಿ ಸಚಿವರಾಗಿದ್ರೆ, ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಆಗಿದ್ದಾರೆ. ಆದರೆ ಈ ಇಬ್ಬರು ಸಚಿವರ ತವರು ಕ್ಷೇತ್ರದ ರೈತರು(Farmers) ಸಂಕಷ್ಟಕ್ಕೀಡಾಗಿದ್ದಾರೆ. ಬರೋಬ್ಬರಿ 28 ಗ್ರಾಮಗಳಿಗೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ. ಕಲಕಾಂಬ, ಅಷ್ಟೇ, ಮುಚ್ಛಂಡಿ, ಕಡೋಲಿ, ಸಾಂಬ್ರಾ, ಮುತಗಾ, ಬಾಳೇಕುಂದ್ರಿ, ಶಿಂಧೋಳಿ ಸೇರಿ ಒಟ್ಟು 28 ಗ್ರಾಮಗಳಿಗೆ ಬುಡಾ ನೋಟಿಸ್ ನೀಡಿದೆ. ಈ ಮೊದಲು 6 ಕಿ.ಮೀನಷ್ಟಿದ್ದ ಬುಡಾ ವ್ಯಾಪ್ತಿ ಇದೀಗ 10 ಕಿಮೀಗೆ ವಿಸ್ತರಣೆ ಆಗಿದೆ. ಕೃಷಿಯೇತರ ಚಟುವಟಿಕೆ ಮಾಡುವುದಾದರೆ ನಮ್ಮ ಅನುಮತಿ ಪಡೆಯಲೇಬೇಕು ಎಂದು ಬುಡಾ(Buda) ತನ್ನ ನೋಟಿಸ್‍ನಲ್ಲಿ ತಿಳಿಸಿದೆ. ಈ ನೋಟಿಸ್ ಕೈ ಸೇರುತ್ತಿದ್ದಂತೆ ಹೌಹಾರಿರುವ ರೈತರು ಬುಡಾ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದಾರೆ. ನಮ್ಮ ಜಮೀನಿನಲ್ಲಿ ನಾವು ಏನು ಬೇಕಾದರೂ ಮಾಡುತ್ತೇವೆ. ಅದಕ್ಕೆ ಬುಡಾ ಅನುಮತಿ ಏಕೆ ಎಂದು ಪ್ರಶ್ನಿಸ್ತಿದ್ದಾರೆ. ನಗರ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಜಮೀನಿನಲ್ಲಿ ಕೃಷಿಯೇತರ ಚಟುವಟಿಕೆ ನಡೆಸಬೇಕಾದರೆ ಬುಡಾ ಅನುಮತಿ ಕಡ್ಡಾಯ. ಎನ್.ಎ ಲೇಔಟ್ ಆಗಲಿ, ಯಾವುದೇ ಕಟ್ಟಡ ನಿರ್ಮಾಣಕ್ಕೆ ಬೆಳಗಾವಿ ನಗಾರಾಭಿವೃದ್ಧಿ ಪ್ರಾಧಿಕಾರದ ಅನುಮತಿ ಪಡೆಯಲೇಬೇಕು ಎಂಬುದು ಮೊದಲಿನಿಂದ ಇರುವ ನಿಯಮ. ಸರ್ಕಾರದ ಆದೇಶದಂತೆ ಇದೀಗ ಬುಡಾ ಸ್ಥಳೀಯ ಯೋಜನಾ ಪ್ರದೇಶವನ್ನು ವಿಸ್ತರಣೆಗೆ ಮುಂದಾಗಿದೆ. ಈ ಕುರಿತು ಬುಡಾ ಆಯುಕ್ತರು ಹೇಳೋದು ಹೀಗೆ.

ಇದನ್ನೂ ವೀಕ್ಷಿಸಿ:  ಚರ್ಮವ್ಯಾದಿ , ಸಂತಾನ ಫಲಕ್ಕಾಗಿ ಇಲ್ಲಿದೆ ರಹಸ್ಯ ನಾಗಮಂತ್ರ..! ನೀವು ಆಚರಿಸಬೇಕಾಗಿದ್ದು ಏನು..?

Video Top Stories