Asianet Suvarna News Asianet Suvarna News

ಪ್ಯಾರಾ ಏಷ್ಯನ್ ಗೇಮ್ಸ್‌ಗೆ ಗಣಿನಾಡಿನ ಯುವಕ: ಅಂಗವಿಕಲತೆಯನ್ನೂ ಮೀರಿ ಸಾಧನೆ ಗೈದ 17ರ ಪೋರ !

ದೇಹದ ಎಲ್ಲಾ ಅಂಗಾಂಗಗಳು ಸರಿಯಿದ್ರೂ ಸಾಧನೆ ಮಾಡಲು ವ್ಯವಸ್ಥೆಯಲ್ಲಿನ ಲೋಪದೋಷವನ್ನು ಎತ್ತಿಹಿಡಿಯೋ ಅದೆಷ್ಟೋ ಜನರ ಮಧ್ಯೆ ಅಪಘಾತವೊಂದರಲ್ಲಿ ಎರಡು ಕಾಲುಗಳನ್ನು ಕಳೆದುಕೊಂಡ ಯುವಕನೊಬ್ಬ ಇದೀಗ ಸಾಧನೆಯ ಶಿಖರವನ್ನೇರಿದ್ದಾನೆ. 
 

ಎರಡು ಕಾಲು ಇಲ್ಲದೇ ಇದ್ರೂ ಈಜುಕೊಳದಲ್ಲಿ ಬಿಟ್ಟುಬಿಡದೇ ಶರ ವೇಗದಲ್ಲಿ ಸ್ವೀಮ್ಮಿಂಗ್ ಮಾಡ್ತಿರೋ ಇವರ ಹೆಸರು ಗೋಪಿಚಂದ್. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕು ದರೋಜಿ ಗ್ರಾಮದ ಗೋಪಿಚಂದ್ ಚೀನಾದ ಹಾಂಕ್ಕಾಂಗ್‌ನಲ್ಲಿ ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್‌ಗೆ(Para Asian Games) ಆಯ್ಕೆಯಾಗಿದ್ದಾನೆ. ಎರಡನೇ ತರಗತಿ ಓದುತ್ತಿದ್ದಾಗ ರಸ್ತೆ ಅಪಘಾತದಲ್ಲಿ(Accident)  ಗೋಪಿಚಂದ್ ತನ್ನ ಎರಡು ಕಾಲುಗಳನ್ನು ಕಳೆದುಕೊಂಡನು. ಆದ್ರೇ ತನಗೆ ಕಾಲಿಲ್ಲ ಎಂದು ಧೃತಿಗೇಡದ ಗೋಪಿಚಂದ್(Gopichand) ಸುಮ್ಮನೆ ಕೂಡದೆ ಸಾಧನೆಯ ಒಂದೊಂದೇ ಮೆಟ್ಟಿಲು ಹತ್ತಿ, ಇಂದು ಅಂತಾರಾಷ್ಟ್ರೀಯ ಈಜುಪಟುವಾಗಿ(Swimming) ಹೊರಹೊಮ್ಮಿದ್ದಾನೆ. ಚೀನಾದ ಹಾಂಗ್‌ಕಾಂಗ್‌ನಲ್ಲಿ ಇದೇ ತಿಂಗಳ 22 ರಿಂದ 28ರವರೆಗೆ  ನಡೆಯಲಿರುವ ಪ್ಯಾರಾ ಏಷ್ಯನ್ ಗೇಮ್ಸ್‌ಗೆ 17 ವರ್ಷದ ಸ್ವಿಮ್ಮಿಂಗ್ ವಿಭಾಗದಲ್ಲಿ ಆಯ್ಕೆಯಾಗಿದ್ದಾನೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಗೋಪಿಚಂದ್ ಪ್ಯಾರಾ ಏಷ್ಯಾನ್ ಗೇಮ್ಸ್ಗೆ ಆಯ್ಕೆಯಾದ ಮೊದಲ ಕನ್ನಡಿಗೆ ಎನ್ನುವ ಖ್ಯಾತಿಗೆ ಪಾತ್ರವಾಗಿದ್ದಾರೆ. ಬಳ್ಳಾರಿಯಲ್ಲಿ ಅಂಗವಿಕಲ ಮಕ್ಕಳಿಗೆ ಈಜು ಕಲಿಸೋ ವಿಶೇಷ ತರಬೇತುದಾರ ರಜಿನಿಯವರ ಹತ್ತು ವರ್ಷದ ಶ್ರಮದಿಂದಲೇ ಗೋಪಿಚಂದ ರಾಷ್ಟ್ರ, ಅಂತರರಾಷ್ಟ್ರ ಮಟ್ಟದ ಈಜು ಸ್ಪರ್ಧೆಯಲ್ಲಿ 23 ಚಿನ್ನ ಹಾಗೂ 8 ಬೆಳ್ಳಿ ಸೇರಿದಂತೆ ಅನೇಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  ಇದೀಗ ಹೆಚ್ಚಿನ ತರಬೇತಿ ನೀಡ್ತಿರೋ ಬೆಂಗಳೂರಿನ ಶರತ್ ಗಾಯಕ್ವಾಡ ಅವರ ನಿರಂತರ ತರಬೇತಿಯಿಂದ ಇಂದು ಗೋಪಿಚಂದ ಪ್ಯಾರ ಏಷ್ಯಾನ್ ಗೇಮ್ಸ್ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಕೋಟಿ ಕೋಟಿ ವೆಚ್ಚದ ಹಾಸ್ಟೆಲ್‌ಗಿಲ್ಲ ಉದ್ಘಾಟನೆ ಭಾಗ್ಯ: ಪುಂಡ ಪೋಕರಿಗಳ ಅಡ್ಡೆಯಾಗ್ತಿದೆ ಸರ್ಕಾರಿ ಕಟ್ಟಡ