ಕೋಟಿ ಕೋಟಿ ವೆಚ್ಚದ ಹಾಸ್ಟೆಲ್‌ಗಿಲ್ಲ ಉದ್ಘಾಟನೆ ಭಾಗ್ಯ: ಪುಂಡ ಪೋಕರಿಗಳ ಅಡ್ಡೆಯಾಗ್ತಿದೆ ಸರ್ಕಾರಿ ಕಟ್ಟಡ

ಯಾರ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಅಂತರಲ್ಲ.. ಹಾಗೆ ಜನ್ರ ತೆರಿಗೆ ದುಡ್ಡನ್ನ ಸರ್ಕಾರ ಹೇಗೆ ಪೋಲು ಮಾಡ್ತಿದೆ ಅನ್ನೋದಕ್ಕೆ ಇಲ್ಲೊಂದು ಸ್ಟೋರಿಯಿದೆ. ವಿದ್ಯಾರ್ಥಿಗಳಿಗೆ ನೆರವಾಗಬೇಕಿದ್ದ ಈ ಕಟ್ಟಡ, ಉದ್ಘಾಟನೆ ಭಾಗ್ಯ ಸಿಗದೇ ಭೂತ ಬಂಗಲೆಯಾಗಿ, ಪುಂಡ ಪೋಕರಿಗಳ ತಾಣವಾಗ್ತಿದೆ.
 

Share this Video
  • FB
  • Linkdin
  • Whatsapp

ಸರ್ಕಾರ ಕೋಟಿ ಕೋಟಿ ವೆಚ್ಚ ಮಾಡಿ ನಿರ್ಮಾಣವಾದ ಕಟ್ಟಡಗಳು ಅದೇಷ್ಟೊ ವರ್ಷ ಉದ್ಘಾಟನೆ ಭಾಗ್ಯವಿಲ್ಲದೆ ಪಾಳು ಬೀಳುತ್ತಿವೆ. ಇದೇ ಸಾಲಿನಲ್ಲಿ ಬೆಂಗಳೂರಿನ ಯುನಾನಿ ಮತ್ತು ಹೋಮಿಯೋಪತಿ ಕಾಲೇಜಿನ(Unani and Homeopathy College) ವಿದ್ಯಾರ್ಥಿನಿಯರ ಹಾಸ್ಟೆಲ್(Hostel) ಕೂಡ ಸೇರಿ ಕೊಂಡಿದೆ. 2020ರಲ್ಲಿ ಬಿಜೆಪಿ(BJP)ಸರ್ಕಾರದ ಅವಧಿಯಲ್ಲಿ ಬಸವೇಶ್ವರ ನಗರದ ಸಿದ್ದಯ್ಯ ಪುರಾಣಿಕ ರಸ್ತೆಯಲ್ಲಿ ಆಗಿನ ಆರೋಗ್ಯ ಸಚಿವ ಡಾ. ಸುಧಾಕರ್(DR. Sudhakar) ಈ ಕಟ್ಟಡಕ್ಕೆ ಶಂಕು ಸ್ಥಾಪನೆ ಮಾಡಿದ್ರು. ಕಟ್ಟಡ ಕಾಮಗಾರಿ ಎಲ್ಲ ಮುಗಿದ್ರೂ, ಹೆಲ್ತ್ ಇಂಜಿನಿಯರಿಂಗ್ ವಿಭಾಗದಿಂದ ಯೂಟಿಲೈಸೇಷನ್ ಸರ್ಟಿಫಿಕೇಟ್ ನೀಡಿಲ್ಲ. ಹೀಗಾಗಿ 2 ವರ್ಷದಿಂದ ಈ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ. ಉದ್ಘಾಟನೆ ಭಾಗ್ಯ ಸಿಗದೇ ಈ ಕಟ್ಟಡಕ್ಕೆ ಸೆಕ್ಯೂರಿಟಿ ಇಲ್ಲದೇ, ನಿರ್ವಹಣೆಯೂ ಇಲ್ಲ. ಇದರಿಂದ ಹಾಸ್ಟೆಲ್ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಯ ಅಡ್ಡೆಯಾಗಿದೆ ಎಂಬ ಆರೋಪೂ ಕೇಳಿ ಬಂದಿದೆ. ಹಾಸ್ಟೆಲ್ ಅವರಣದಲ್ಲಿರೋ ಲಕ್ಷಾಂತರ ಮೌಲ್ಯದ ಜನರೇಟರ್ಗಳು ಕಸದ ತೊಟ್ಟಿ ಸೇರುತ್ತಿವೆ. ಈ ಬಗ್ಗೆ ಕಾಲೇಜು ಪ್ರಾಂಶುಪಾಲರು ಆಯುಷ್ ಇಲಾಖೆಗೆ ಪತ್ರ ಬರೆದ್ರೂ, ಇಲಾಖೆಯಿಂದ ಮರು ಉತ್ತರ ಸಿಕ್ಕಿಲ್ಲ. 

ಇದನ್ನೂ ವೀಕ್ಷಿಸಿ:  ಮರಳು ಮಾಫಿಯಾಗೆ ಬ್ರೇಕ್ ಹಾಕಿದ್ರೂ ಡೋಂಟ್‌ಕೇರ್‌: ಕರಾವಳಿಯಲ್ಲಿ ಸೀಜ್ ಮಾಡಿರೋ ಮರಳಿನಲ್ಲೂ ಅಕ್ರಮ

Related Video