Asianet Suvarna News Asianet Suvarna News

ಕಾರವಾರ: ಹಸಿರು ಬಣ್ಣಕ್ಕೆ ತಿರುಗಿದ ಗಂಗಾವಳಿ ನದಿ ನೀರು, ಆತಂಕದಲ್ಲಿ ಜನತೆ

* ಅರಬ್ಬಿ ಸಮುದ್ರ ಸೇರುವ ಗಂಗಾವಳಿ ನದಿ
* ನದಿಯ ನೀರು ಪರೀಕ್ಷೆ ಮಾಡಿಸುವಂತೆ ಸ್ಥಳೀಯರ ಒತ್ತಾಯ
* ಸ್ಥಳೀಯರ ಆತಂಕಕ್ಕೆ ಕಾರಣವಾದ ನದಿ ನೀರು

ಉತ್ತರಕನ್ನಡ(ಮೇ.15): ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ನಡುವೆ ಹರಿದು ಅರಬ್ಬಿ ಸಮುದ್ರ ಸೇರುವ ಗಂಗಾವಳಿ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದೆ. ಇದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಕಳೆದೊಂದು ವಾರದಿಂದ ನದಿಯ ಗಾಢ ಹಸಿರು ಬಣ್ಣಕ್ಕೆ ತಿರುಗಿದೆ. ಹೀಗಾಗಿ ನದಿಯ ನೀರು ಪರೀಕ್ಷೆ ಮಾಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಕಳೆದ 10 ವರ್ಷಗಳ ಹಿಂದೆ ಇದೇ ರೀತಿ ನದಿಯ ನೀರು ಹಸಿರು ಬಣ್ಣಕ್ಕೆ ತಿರುಗಿದ್ದರಿಂದ ಚಿಕುನ್‌ಗುನ್ಯಾ, ಡೇಂಘಿ ಅಂಕ ಕಾಯಿಲೆಗಳು ಬಂದಿದ್ದವು ಎಂದು ಸ್ಥಳೀಯರು ಹೇಳಿದ್ದಾರೆ. 

ಕೊರೋನಾ ಪಾಸಿಟಿವಿಟಿ ರೇಟ್‌ ಹೆಚ್ಚಳ: ಡೇಂಜರ್‌ ಝೋನ್‌ನಲ್ಲಿ ರಾಜ್ಯದ 15 ಜಿಲ್ಲೆಗಳು..!

Video Top Stories