Asianet Suvarna News Asianet Suvarna News

ಈಡೇರದ ಭರವಸೆ, ಸರ್ಕಾರದ ವಿರುದ್ಧ ಸಿಡಿದೆದ್ಧ ನೇಕಾರರು: ಉಚಿತ ವಿದ್ಯುತ್‌ಗೆ ಆಗ್ರಹ..!

ಚುನಾವಣೆಗೂ ಮೊದಲು ರಾಜ್ಯ ಕಾಂಗ್ರೆಸ್ ಹತ್ತಾರು ಫ್ರೀ ಗ್ಯಾರಂಟಿ ಘೋಷಿಸಿದ್ರು. ನೇಕಾರರಿಗೂ ಫ್ರೀ ವಿದ್ಯುತ್ ಭರವಸೆ ನೀಡಿದ್ರು. ಫ್ರೀ ಭರವಸೆ ನೆಚ್ಚಿಕೊಂಡಿದ್ದ ನೇಕಾರರಿಗೆ ನಿರಾಸೆಯಾಗಿದ್ದು ಸರ್ಕಾರದ ವಿರುದ್ಧವೇ ಸಿಟ್ಟು ಹೊರಗೆ ಹಾಕ್ತಿದ್ದಾರೆ.
 

ನೇಕಾರರಿಗೆ 20 ಎಚ್‌ಪಿ ವಿದ್ಯುತ್ ಫ್ರೀ. ಚುನಾವಣೆಗೂ ಮುನ್ನ ಸಿದ್ದರಾಮಯ್ಯ ನೀಡಿದ ಆಶ್ವಾಸನೆ ಇದು. ಇಂಥ ಆಶ್ವಾಸನೆಗಳು, ಗ್ಯಾರಂಟಿ ಘೋಷಣೆಗಳಿಂದಲೇ 2023ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಸಿದ್ದರಾಮಯ್ಯ(Siddaramaiah) ನೇತೃತ್ವದ ಕಾಂಗ್ರೆಸ್(Congress)  ಸರ್ಕಾರ ರಚನೆಯಾಗಿ 4 ತಿಂಗಳು ಕಳೆದೊಯ್ತು. ಆದ್ರೆ, ನೇಕಾರಿರಿಗೆ ಘೋಷಿಸಿದ ಫ್ರೀ ವಿದ್ಯುತ್(free electricity) ಮಾತ್ರ ಇನ್ನೂ ಸಿಕ್ಕಿಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ಧ ಗದಗ ಜಿಲ್ಲೆ ನೇಕಾರರು ಆಕ್ರೋಶಗೊಂಡಿದ್ದಾರೆ. ಕರೆಂಟ್ ಬಿಲ್(Current bill) ಪಾವತಿಸಲ್ಲ ಅಂತ ಪಟ್ಟು ಹಿಡಿದಿದ್ದಾರೆ. ನುಡಿದಂತೆ ನಡೆದಿದ್ದೇ ಆಗಿದ್ರೆ ಇಷ್ಟೊತ್ತಿಗೆ ನೇಕಾರರಿಗೆ ಉಚಿತ್ ವಿದ್ಯುತ್ ಸಿಗಬೇಕಿತ್ತು. ಜುಲೈ 7ರಂದು ಮಂಡನೆಯಾದ ಬಜೆಟ್‌ನಲ್ಲಿ ನೇಕಾರರ ಪವರ್ ಲೋಮ್‌ಗಳಿಗೆ 10 ಎಚ್‌ಪಿ ಉಚಿತ ವಿದ್ಯುತ್ ಘೋಷಣೆ ಮಾಡಿದ್ರು. ಆದ್ರೆ, ಸರ್ಕಾರದ ಘೋಷಣೆ ಕೇವಲ ಘೋಷಣೆಗಷ್ಟೆ ಸೀಮಿತವಾಗಿದೆ. ಚುನಾವಣೆಗೂ ಮುನ್ನ ಸಿದ್ದರಾಮಯ್ಯ ನೀಡಿದ ಭರವಸೆ ಈಡೇರಿಸುವಂತೆ ನೇಕಾರರು ಆಗ್ರಹಿಸ್ತಿದ್ದಾರೆ. ಇದರ ಜತೆಗೆ ನೇಕಾರಿಗೂ ಕಾರ್ಮಿಕರಿಗೆ ನೀಡುವ ಸೌಲಭ್ಯ ನೀಡುವಂತೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದುಕೊಳ್ಳಬೇಕು.. ಆದಷ್ಟು ಬೇಗ ನೇಕಾರರಿಗೆ ಉಚಿತ ವಿದ್ಯುತ್ ಯೋಜನೆ ಅನ್ವಯವಾಗಬೇಕು. ನೇಕಾರಿಕೆಯನ್ನ ನಂಬ್ಕೊಂಡು ಜೀವನ ನಡೆಸುತ್ತಿರೋ ಸಾವಿರಾರು ಕುಟುಂಬಗಳ ಜೊತೆಗೆ ಸರರ್ಕಾರ ನಿಲ್ಲಬೇಕು.. ಸಂಕಷ್ಟದಲ್ಲಿರೋ ಕಾಯಕ ಜೀವಿಗಳಿಗೆ ನೆರವಾಗಬೇಕೆಂಬುದು ನೇಕಾರರ ಒತ್ತಾಯ.

ಇದನ್ನೂ ವೀಕ್ಷಿಸಿ:  ದೊಡ್ಮನೆ ಹುಡುಗ ಮೀಟ್ಸ್ ಗೌಡ್ರು ಮನೆ ಹುಡ್ಗ: ನಿಖಿಲ್ ಶೂಟಿಂಗ್ ಸೆಟ್‌ಗೆ ಯುವ ಸಪ್ರೈಸ್ ಎಂಟ್ರಿ..!

Video Top Stories