ದೊಡ್ಮನೆ ಹುಡುಗ ಮೀಟ್ಸ್ ಗೌಡ್ರು ಮನೆ ಹುಡ್ಗ: ನಿಖಿಲ್ ಶೂಟಿಂಗ್ ಸೆಟ್‌ಗೆ ಯುವ ಸಪ್ರೈಸ್ ಎಂಟ್ರಿ..!

ದೊಡ್ಮನೆ ಹುಡುಗ ಮೀಟ್ಸ್ ಗೌಡ್ರು ಮನೆ ಹುಡ್ಗ..!
ನಿಖಿಲ್ ಶೂಟಿಂಗ್ ಸೆಟ್ನಲ್ಲಿ ಯುವ ರಾಜ್ಕುಮಾರ್!
ಕುಷಲೋಪರಿ ವಿಚಾರಿಸಿಕೊಂಡ ಯುವ-ನಿಖಿಲ್!

Share this Video
  • FB
  • Linkdin
  • Whatsapp

ಸಿನಿಮಾ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ ನಟ ಮತ್ತೊಬ್ಬ ನಟನ ಸಿನಿಮಾ ಸೆಟ್‌ಗೆ ಹೋಗಿ ವಿಶ್ ಮಾಡೋದು, ಮಾತುಕತೆ ನಡೆಸೋದು ಕಾಮನ್. ಅದೇ ಪದ್ಧತಿ ಮುಂದುವರೆಸ್ಕೊಂಡು ಹೋಗ್ತಿದ್ದಾರೆ ಅಣ್ಣಾವ್ರ ಮೊಮ್ಮಗ ಯುವ ರಾಜ್‌ಕುಮಾರ್(Yuva Rajkumar). ಹೆಚ್ಎಂಟಿ ಬಳಿ ಇರುವ ಸಪೋಟಾ ಗಾರ್ಡ್‌ನಲ್ಲಿ ರಾಜಕಾರಣಿ, ನಟ ನಿಖಿಲ್ ಕುಮಾರಸ್ವಾಮಿ(Nikhil Kumaraswamy) ಹೊಸ ಸಿನಿಮಾ ಶೂಟಿಂಗ್ (Movie Shooting) ನಡೀತಾ ಇದೆ. ಆ ಶೂಟಿಂಗ್ ಸ್ಪಾಟ್‌ಗೆ ಯುವ ರಾಜ್‌ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ರಾಜ್ ಸಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ. ಲೈಕಾ ಪ್ರೊಡೊಕ್ಷನ್‌ನ ಬಿಗ್‌ಬಜೆಟ್ ಸಿನಿಮಾ ಇದಾಗಿದ್ದು, ನಿಖಿಲ್ ಕುಮಾರಸ್ವಾಮಿಗೆ ನಿರ್ದೇಶಕ ಲಕ್ಷ್ಮಣ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇತ್ತೀಚೆಗಷ್ಟೆ ಶಿವಣ್ಣ ಹಾಗೂ ಧ್ರುವ ಸರ್ಜಾ ಕೂಡ ನಿಖಿಲ್ ಹೊಸ ಸಿನಿಮಾ ಶೂಟಿಂಗ್ ಸೆಟ್‌ಗೆ ಭೇಟಿ ನೀಡಿದ್ರು.ಆ ಫೋಟೊಗಳು ವೈರಲ್ ಆಗಿತ್ತು. ಇದೀಗ ದೊಡ್ಮನೆ ನಟ ಯುವ ರಾಜ್‌ಕುಮಾರ್ ಸರದಿ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ 'ಯುವ' ಸಿನಿಮಾದಲ್ಲಿ ಹೀರೋ ಆಗಿ ಡೆಬ್ಯೂ ಆಗ್ತಿರೋ ಯುವ ರಾಜ್ ಕುಮಾರ್‌ಗೆ ಸಂತೋಷ್ ಆನಂದ್ ರಾಮ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಆ ಸಿನಿಮಾ ಶೂಟಿಂಗ್ ಕೂಡ ಭರದಿಂದ ಸಾಗುತ್ತಿದೆ. 

ಇದನ್ನೂ ವೀಕ್ಷಿಸಿ:  'ನರಸಿಂಹ'ನ ಕ್ರೇಜ್ ಶಿವಣ್ಣನಿಗಾಗಿ ಭಾರಿ ಡಿಮ್ಯಾಂಡ್: ಸೆಂಚುರಿ ಸ್ಟಾರ್‌ಗಾಗಿ ಡಾರ್ಲಿಂಗ್ ಪ್ರಭಾಸ್ ವೇಟಿಂಗ್!

Related Video