ಬ್ಯಾಂಕ್ ಮ್ಯಾನೇಜರ್ ದೋಖಾ..ರೈತನಿಗೆ ಸಂಕಷ್ಟ: ಏಷ್ಯಾನೆಟ್ ಸುವರ್ಣನ್ಯೂಸ್ ವರದಿಯಿಂದ ಸಮಸ್ಯೆ ಇತ್ಯರ್ಥ
ಬ್ಯಾಂಕ್ ಮ್ಯಾನೇಜರ್ ಮೋಸದಿಂದ ರೈತ ಸಂಕಷ್ಟಕ್ಕೆ ಸಿಲುಕಿದ್ದ. ಬ್ಯಾಂಕ್ ಬಾಗಿಲಿಗೆ ಅಲೆದು ಅಲೆದು ಹೈರಾಣಾಗಿದ್ದ. ಈ ಬಗ್ಗೆ ಏಷ್ಯಾನೆಟ್ ಸುವರ್ಣನ್ಯೂಸ್‌ನಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ರೈತನ ಸಮಸ್ಯೆ ಬಗೆಹರಿದಿದೆ.
500 ರೂಪಾಯಿಯ ನೋಟುಗಳನ್ನ ಎಣಿಸುತ್ತಾ.. ನೆಮ್ಮದಿಯ ನಿಟ್ಟುಸಿರು ಬಿಡುತ್ತಿರೋ ರೈತನ ಹೆಸರು ಮಹದೇವಪ್ಪ(Farmer Mahadevappa) ಜೋಗಿನ್. ಗದಗ ತಾಲೂಕಿನ ತಿಮ್ಮಾಪುರ ಗ್ರಾಮದವರು. ಕೆನರಾ ಬ್ಯಾಂಕ್‌ನಲ್ಲಿ(Canara bank) ತಮ್ಮದೇ ಖಾತೆಯಲ್ಲಿದ್ದ ಹಣ ಪಡೆಯಲು ವರ್ಷಗಳಿಂದ ಅಲೆದಾಟ ನಡೆಸುತ್ತಿದ್ರು. ಬ್ಯಾಂಕ್ ಬಾಗಿಲಿಗೆ ಎಡತಾಕಿ ಹಣಕ್ಕಾಗಿ ಮನವಿ ಮಾಡ್ತಿದ್ರು. ಆದ್ರೆ ಬ್ಯಾಂಕ್(Bank) ಸಿಬ್ಬಂದಿ ಯಾವುದೇ ಸ್ಪಂದನೆ ನೀಡಿರಲಿಲ್ಲ.. ರೈತನ ಸಂಕಷ್ಟದ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್ ವರದಿ ಬಿತ್ತರಿಸಿದ ಬೆನ್ನಲ್ಲೇ ಸಮಸ್ಯೆ ಬಗೆಹರಿದಿದೆ. ಇದು ಸುವರ್ಣನ್ಯೂಸ್ ಬಿಗ್ ಇಂಪ್ಯಾಕ್ಟ್.ಅಷ್ಟಕ್ಕೂ ರೈತ ಮಹದೇವಪ್ಪ ತನ್ನ ಹಣಕ್ಕಾಗಿ ಈ ಪರಿ ಕಷ್ಟಪಡಬೇಕಾದ ಸ್ಥಿತಿ ಬಂದಿದ್ದು ಬ್ಯಾಂಕ್ನ ಹಳೇ ಮ್ಯಾನೇಜರ್ ಮಾಡಿದ ಮೋಸದಿಂದ. ರೈತ ಮಹದೇವಪ್ಪ ಈ ಹಿಂದೆ ಬ್ಯಾಂಕ್ನಲ್ಲಿ 2 ಲಕ್ಷ ಸಾಲ ಪಡೆದಿದ್ರು. ಅದೇ ವರ್ಷ ಹಣವನ್ನ ಬ್ಯಾಂಕ್ ಮ್ಯಾನೇಜರ್(Manager) ರಂಗಪ್ಪಗೆ ಮರುಪಾವತಿಸಿದ್ದರು. ಆದ್ರೆ ಮ್ಯಾನೇಜರ್ ಹಣವನ್ನ ಖಾತೆಗೆ ಹಾಕದೇ ತನ್ನ ಜೇಬಿಗಿಳಿಸಿದ್ದ. ಸಾಲ ಮರುಪಾವತಿಸುವಂತೆ ನೋಟಿಸ್ ಬಂದಾಗಲೇ ಮ್ಯಾನೇಜರ್ ಮೋಸ ರೈತನಿಗೆ ಅರಿವಾದದ್ದು.. ಆದ್ರೆ ಅಷ್ಟರಲ್ಲಿ ರಂಗಪ್ಪ ಬೇರೆಡೆಗೆ ವರ್ಗವಾಗಿದ್ದ. ಕೆನರಾ ಬ್ಯಾಂಕ್ ಸಿಬ್ಬಂದಿ ರೈತನ ಖಾತೆಯನ್ನ ಸೀಜ್ ಮಾಡಿದ್ದರು. ಇದ್ರಿಂದ ಖಾತೆಗೆ ಜಮೆಯಾಗ್ತಿದ್ದ ಬೆಳೆ ವಿಮೆ, ಉದ್ಯೋಗ ಖಾತ್ರಿ ಕೂಲಿ ಹಣ, ಬೆಳೆ ಪರಿಹಾರದ ಹಣ ಪಡೆದುಕೊಳ್ಳಲು ಸಾಧ್ಯವಾಗ್ತಿರಲಿಲ್ಲ. ಸದ್ಯ ಸುವರ್ಣನ್ಯೂಸ್ ವರದಿ ಬಳಿಕ ಸಿಬ್ಬಂದಿ ಅಕೌಂಟ್ ರಿಲೀಸ್ ಮಾಡಿದ್ದು, ಖಾತೆಯಲ್ಲಿನ ಹಣ ರೈತನ ಕೈ ಸೇರಿದೆ. ಬ್ಯಾಂಕ್ ಸಿಬ್ಬಂದಿ ಇಷ್ಟಕ್ಕೆ ಸುಮ್ಮನಾಗದೇ ಮೋಸ ಮಾಡಿರೋ ಹಳೇ ಮ್ಯಾನೇಜರ್ ಹಣ ಮರುಪಾವತಿಗೆ ಕ್ರಮಕೈಗೊಳ್ಳಬೇಕು..ಹಾಗೂ ರೈತ ರಂಗಪ್ಪಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡಬೇಕು.
ಇದನ್ನೂ ವೀಕ್ಷಿಸಿ: Today Horoscope: ಕುಂಭ ರಾಶಿಯವರಿಗೆ ಆರೋಗ್ಯ ಸಮಸ್ಯೆ ಕಾಡಲಿದ್ದು,ಇಂದು ಶನೈಶ್ಚರ ಪ್ರಾರ್ಥನೆ ಮಾಡಿ