Asianet Suvarna News Asianet Suvarna News

ಕರ್ನಾಟಕ ಬಿಹಾರ ಆಗುತ್ತಿದೆ ಎಂದ ವಿಜಯೇಂದ್ರ: 27 ಜನರ ಸಾವಿಗೆ ಹೊಣೆ ಯಾರು ಎಂದ ಪರಮೇಶ್ವರ್‌?

ಕರ್ನಾಟಕ ಬಿಹಾರ ಆಗುತ್ತಿದೆ ಎಂಬ ವಿಜಯೇಂದ್ರ ಹೇಳಿಕೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ಅವರ ಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಹೇಗಿದ್ದಾವೆ ಎಂದು ನೋಡಿಕೊಳ್ಳಲಿ ಎಂದಿದ್ದಾರೆ. 

ಕರ್ನಾಟಕ(Karnataka) ಬಿಹಾರ(Bihar) ಆಗುತ್ತಿದೆ ಎಂಬ ವಿಜಯೇಂದ್ರ (BJP State President Vijayendra) ಹೇಳಿಕೆಗೆ ಡಾ.ಜಿ.ಪರಮೇಶ್ವರ್ (Home Minister Dr. G Parameshwar) ತಿರುಗೇಟು ನೀಡಿದ್ದಾರೆ. ಅವರ ಪಕ್ಷ ಆಡಳಿತದಲ್ಲಿರುವ ರಾಜ್ಯಗಳು ಹೇಗಿದ್ದಾವೆ ಎಂದು ನೋಡಿಕೊಳ್ಳಲಿ, ನಿನ್ನೆ ಗುಜರಾತಿನಲ್ಲಿ ಗೇಮ್‌‌ ಝೋನ್ ನಲ್ಲಿ ಬೆಂಕಿ ಹತ್ತಿಕೊಂಡು 27 ಜನರ ಸಾವಿಗೀಡಾಗಿದ್ದಾರೆ. ಆ ಸಾವಿಗೆ ಯಾರು ಹೊಣೆ? ರಾಜೀನಾಮೆ ಅವರು ಕೊಡಬೇಕಲ್ಲ..? ಅಲ್ಲಿನ ಸಿಎಂ, ಗೃಹಸಚಿವರು ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ. ಹೇಳೊದು ಸುಲಭ, ಜಸ್ಟಿಫಿಕೇಷನ್ ಮಾಡಿಕೊಳ್ಳಬೇಕಲ್ಲ, ನಾವು ಕಾನೂನು ಸುವ್ಯವಸ್ಥೆ ಹಾಳಾಗುವುದಕ್ಕೆ ಬಿಡುವುದಿಲ್ಲ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಲ್ಲಾ ರೀತಿ ಕ್ರಮ ಕೈಗೊಂಡಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್‌ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  Rave Party in Bengaluru: ರೇವ್ ಪಾರ್ಟಿ ಪ್ರಕರಣ..ಎಣ್ಣೆ ಕಿಕ್, ಡ್ರಗ್ಸ್ ಕಿಕ್ ಜೊತೆಗೆ ಅದೂ ಸಹ ಇತ್ತಂತೆ!