Rave Party in Bengaluru: ರೇವ್ ಪಾರ್ಟಿ ಪ್ರಕರಣ..ಎಣ್ಣೆ ಕಿಕ್, ಡ್ರಗ್ಸ್ ಕಿಕ್ ಜೊತೆಗೆ ಅದೂ ಸಹ ಇತ್ತಂತೆ!

ರೇವ್ ಪಾರ್ಟಿ ಸಂಬಂಧ ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ. ಅದರಂತೆ  ಎಣ್ಣೆ ಕಿಕ್, ಡ್ರಗ್ಸ್ ಕಿಕ್, ಜೊತೆ ಲಲನೆಯರ ನೃತ್ಯದ ಕಿಕ್ ಸಹ ಪಾರ್ಟಿ ವೇಳೆ ಇತ್ತು ಎಂದು ತಿಳಿದುಬಂದಿದೆ. 

Share this Video
  • FB
  • Linkdin
  • Whatsapp

ಬೆಂಗಳೂರಿನ ಹೊರವಲಯದಲ್ಲಿ ರೇವ್ ಪಾರ್ಟಿ(Rave Party) ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಸಿಸಿಬಿ(CCb) ತನಿಖೆ ವೇಳೆ ಮತ್ತಷ್ಟು ಸ್ಫೋಟಕ ಅಂಶ ಬೆಳಕಿಗೆ ಬಂದಿದ್ದು, ಡ್ರಗ್ಸ್ (Drugs) ಅಷ್ಟೇ ಅಲ್ಲದೆ ಈ ವೇಳೆ ಯುವತಿಯರ ಅರೆನಗ್ನ ನೃತ್ಯ ಕೂಡ ನಡೆದಿದೆ ಎನ್ನಲಾಗಿದೆ. ಎಣ್ಣೆ ಕಿಕ್, ಡ್ರಗ್ಸ್ ಕಿಕ್, ಜೊತೆ ಲಲನೆಯರ ನೃತ್ಯದ ಕಿಕ್ ಸಹ ಪಾರ್ಟಿ ವೇಳೆ ಇತ್ತು ಎಂದು ಕಂಡುಕೊಳ್ಳಲಾಗಿದೆ. ಆಂಧ್ರಪ್ರದೇಶದ ವಿಧಾನಸಭಾ ಎಲೆಕ್ಷನ್ ಬೆಟ್ಟಿಂಗ್ ಸಹ ಈ ವೇಳೆ ನಡೆದಿದ್ದು, ಸೆಕ್ಸ್ ಪಾರ್ಟಿ ಬಗ್ಗೆ ಮಾಹಿತಿ ತಿಳಿದುಬಂದಿದೆ. 

ಆಂಧ್ರ ವಿಧಾನಸಭೆ ಮಾತ್ರವಲ್ಲದೆ ಲೋಕಸಭೆ ಚುನಾವಣೆ ಸಂಬಂಧವೂ ಬೆಟ್ಟಿಂಗ್ ಕಟ್ಟಿದ್ದರಂತೆ. ತನಿಖೆ ವೇಳೆ ಲಕ್ಷಗಟ್ಟಲೆ ಬೆಟ್ಟಿಂಗ್ ಕಟ್ಟಿರುವ ಬಗ್ಗೆ ಮಾಹಿತಿ ತಿಳಿದುಬಂದಿದ್ದು, ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಸಿಸಿಬಿ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ. ಈ ನಡುವೆ ತೆಲುಗು ನಟಿ ಹೇಮಾಳ ಮತ್ತೊಂದು ಆಟ ಬಯಲಾಗಿದ್ದು, ಎಲ್ಲಾ ಪ್ರಭಾವಿಗಳಿಂದ ಕರೆ ಮಾಡಿಸುತ್ತಿದ್ದಾರಂತೆ.

ಇದನ್ನೂ ವೀಕ್ಷಿಸಿ:  Lok sabha elections 2024: ಏನ್ ಹೇಳ್ತಿದೆ ಎರಡೂ ಪಕ್ಷಗಳ ಆಂತರಿಕ ಸಮೀಕ್ಷೆ..? ಯಾರ ಲೆಕ್ಕ ಪಕ್ಕಾ..?

Related Video