Asianet Suvarna News Asianet Suvarna News
breaking news image

ED Attack: ಬೆಂಗಳೂರು ಶಾಸಕರ ಭವನದ ಮೇಲೆ ಇಡಿ ದಾಳಿ: ನಾಗೇಂದ್ರ, ದದ್ದಲ್ ಕೊಠಡಿಗಳಲ್ಲಿ ದಾಖಲೆಗಳ ಪರಿಶೀಲನೆ

ಮಾಜಿ ಸಚಿವ ನಾಗೇಂದ್ರ, ಶಾಸಕ ದದ್ದಲ್ ಕೊಠಡಿಗಳಲ್ಲಿ ED ಶೋಧ ನಡೆಸಿದ್ದು, ದಾಖಲೆಗಳ ಪರಿಶೀಲನೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ.
 

ಬೆಂಗಳೂರು ಶಾಸಕರ ಭವನದ ಮೇಲೆ ಇಡಿ ದಾಳಿ(ED Attack) ನಡೆಸಿದ್ದು, ಮಾಜಿ ಸಚಿವ ನಾಗೇಂದ್ರ(Former Minister Nagendra), ಶಾಸಕ ದದ್ದಲ್(MLA Daddal) ಕೊಠಡಿಗಳಲ್ಲಿ ED ಶೋಧ ನಡೆಸಿದೆ. ಅಲ್ಲಿ ದಾಖಲೆಗಳ ಪರಿಶೀಲನೆಯನ್ನು ಇಡಿ ಅಧಿಕಾರಿಗಳು ನಡೆಸುತ್ತಿದ್ದಾರೆ. ಶಾಸಕರ‌ ಭವನದಲ್ಲಿರುವ ನಾಗೇಂದ್ರ ಹಾಗೂ ದದ್ದಲ್ ಕೊಠಡಿಗಳ ಮೇಲೆ ದಾಳಿ ನಡೆಸಿದ್ದು, ಕೊಠಡಿ ನಂಬರ್ 360 ಮಾಜಿ ಸಚಿವ ನಾಗೇಂದ್ರ ರೂಮ್‌ ಇದೆ. ಬಸವನಗೌಡ ದದ್ದಲ್  ರೂಂ ನಂಬರ್ 532 ಮೇಲೆ ದಾಳಿ ನಡೆಸಲಾಗಿದೆ. ಶಾಸಕರ ಭವನದಲ್ಲಿ ಶಾಸಕ ಬಸವನಗೌಡ ದದ್ದಾಲ್ ಇರೋ ಬಗ್ಗೆ ಶಂಕೆ ವ್ಯಕ್ತವಾಗಿದೆ. ಶಾಸಕರ ಭವನಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರಾಕರಣೆ. ಈಗಾಗಲೇ ಇಡಿ ಅಧಿಕಾರಿಗಳು ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆಯಲ್ಲೂ ಶಾಸಕ ಬಸವನಗೌಡ ದದ್ದಾಲ್ ಇಲ್ಲ ಶಾಸಕರ ಭವನದಲ್ಲಿ(Shasakara Bhavan) ಇದ್ದಾರೆ ಅನ್ನೋ ಮಾಹಿತಿ ಇದೆ. ಆದರೆ ಮಾಧ್ಯಮಗಳು ಶಾಸಕರ ಭವನಕ್ಕೆ ಒಳಗಡೆ ಪ್ರವೇಶ ನೀಡದೆ, ಗೇಟ್ ಬಳಿಯೇ ಮಾಧ್ಯಮದವನ್ನ ಪೊಲೀಸರು ತಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ವೀಕ್ಷಿಸಿ:  ಬಳ್ಳಾರಿಯಲ್ಲಿ 8 ಜನರ ಇಡಿ ತಂಡದಿಂದ ಶೋಧ! ನಾಗೇಂದ್ರ ಆಪ್ತರ ಮಾಹಿತಿ ಸಂಗ್ರಹಿಸುತ್ತಿರುವ ಇಡಿ

Video Top Stories