ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ,ಈ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ: ಮಾಜಿ ಸಚಿವ ನಾಗೇಂದ್ರ

ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ. ವಾಲ್ಮೀಕಿ ನಿಗಮ ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಮಾಜಿ ಸಚಿವ ನಾಗೇಂದ್ರ ಹೇಳಿದ್ದಾರೆ.
 

Share this Video
  • FB
  • Linkdin
  • Whatsapp

ವಾಲ್ಮೀಕಿ ನಿಗಮದ 187 ಕೋಟಿ ಹಗರಣದಲ್ಲಿ( Valmiki corporation case) ಇಡಿ ಭರ್ಜರಿ ಬೇಟೆ ನಡೆಸಿದ್ದು, ಮಾಜಿ ಸಚಿವ ನಾಗೇಂದ್ರ (Former minister Nagendra) ಅರೆಸ್ಟ್‌ ಮಾಡಿದೆ. ಶಾಂತಿನಗರದ ಇಡಿ ಕಚೇರಿಯಲ್ಲಿ ನಾಗೇಂದ್ರ ವಿಚಾರಣೆ ಮಾಡಲಾಗುತ್ತಿದೆ. ನಿಗಮದಲ್ಲಿ 94 ಕೋಟಿ ನಡೆದಿರೋದು ಪತ್ತೆಯಾಗಿದೆ. ನಿನ್ನೆ ರಾತ್ರಿಯವರೆಗೂ ನಾಗೇಂದ್ರ ನಿವಾಸದಲ್ಲಿ ಪರಿಶೀಲನೆ ನಡೆಸಲಾಗಿದೆ. ಈ ವೇಳೆ ಅಕೌಂಟ್‌ಗಳಿಗೆ ಹಣ ವರ್ಗಾವಣೆಯಾಗಿರುವ ದಾಖಲೆ ಪತ್ತೆಯಾಗಿದೆ. ನಿಗಮಕ್ಕೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ಸಚಿವ ನಾಗೇಂದ್ರ , ನನ್ನನ್ನು ಸುಮ್ಮನೆ ಕರೆದುಕೊಂಡು ಬಂದಿದ್ದಾರೆ. ಪ್ರಕರಣದ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ನಮ್ಮ ಕುಟುಂಬಕ್ಕೆ ತುಂಬಾ ಆಪ್ತರಾಗಿದ್ದರು, ಕನ್ನಡದ ಮೇಲೆ ಅಪರ್ಣಾಗೆ ಅಪಾರ ಪ್ರೀತಿ ಇತ್ತು: ರಾಘವೇಂದ್ರ ರಾಜ್‌ಕುಮಾರ್‌

Related Video