ಇಂದು ಬಿಎಸ್‌ವೈಗೆ ಜನ್ಮದಿನದ ಸಂಭ್ರಮ: ಭದ್ರಾವತಿ ಅಭಿಮಾನಿಗಳಿಂದ ಆಚರಣೆ

ಇಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದು, ಅಭಿಮಾನಿಗಳಿಂದ ರಾಜಾಹುಲಿ ಬರ್ತ್ ಡೇ ಆಚರಣೆ ಮಾಡಲಾಗಿದೆ.

Share this Video
  • FB
  • Linkdin
  • Whatsapp

ಮಾಜಿ ಸಿಎಂ ಬಿಎಸ್‌ವೈಗೆ ಇಂದು ಜನ್ಮ ದಿನದ ಸಂಭ್ರಮ. ಶಿಕಾರಿಪುರದ ಕೇಸರಿಕೋಟೆ ಕಲಿ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರಾಜಾಹುಲಿಯ ಬರ್ತ್‌ ಡೇ ಅನ್ನು ಅಭಿಮಾನಿಗಳು ಅದ್ದೂರಿಯಾಗಿ ಆಚರಣೆ ಮಾಡಿದ್ದಾರೆ. ಭದ್ರಾವತಿ ಅಭಿಮಾನಿಗಳಿಂದ ಬೃಹತ್‌ ಗಾತ್ರದ ಕೇಕ್‌ ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಗಿದೆ. ಬಿಎಸ್‌ವೈ ನಿವಾಸದತ್ತ ಅಭಿಮಾನಿಗಳ ದಂಡು ಹರಿದು ಬಂದಿದ್ದು, ಶಿವಮೊಗ್ಗ ನಿವಾಸದ ಬಳಿ ಫ್ಯಾನ್ಸ್‌ ತಂದಿದ್ದ ಕೇಕ್‌'ನ್ನು ಬಿ.ಎಸ್‌ ಯಡಿಯೂರಪ್ಪ ಕತ್ತರಿಸಿ ಸಂಭ್ರಮಿಸಿದ್ದಾರೆ.

Related Video