Asianet Suvarna News Asianet Suvarna News

ಭೀಮಾ ನದಿ ಪ್ರವಾಹಕ್ಕೆ ನಲುಗಿದ ಉತ್ತರ ಕರ್ನಾಟಕ: ಸಂತ್ರಸ್ತರ ರಕ್ಷಣೆಗೆ ಅರೆಸೇನಾ ಪಡೆ

ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಬಂದ ಸೇನಾಪಡೆ| ತೆಲಂಗಾಣದ ಸಿಕಿಂದರಾಬಾದ್‌ನಿಂದ ಮೇಜರ್‌ ಮಾರ್ಟಿನ್‌ ಅರವಿಂದ ನೇತೃತ್ವದ 98 ಯೋಧರ ತಂಡ ಕಲಬುರಗಿ ಅಗಮನ| ಸೇನಾ ತುಕಡಿಯನ್ನ ಬರಮಾಡಿಕೊಂಡ ಅಪರ ಜಿಲ್ಲಾಧಿಕಾರಿ| 

ಕಲಬುರಗಿ(ಅ.18): ಕಳೆದ ಕೆಲವು ದಿನಗಳಿಂದ ಸುರಿದ ಭಾರೀ ಮಳೆಯಿಂದಾಗಿ ಭೀಮಾ ನದಿ ಪ್ರವಾಹಕ್ಕೆ ಉತ್ತರ ಕರ್ನಾಟಕ ನಲುಗಿ ಹೋಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನ ರಕ್ಷಿಸಲು ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಂತ್ರಸ್ತರನ್ನ ಸುರಕ್ಷಿತವಾಗಿ ರಕ್ಷಿಸಲು ಸೇನಾಪಡೆ ಬಂದಿಳಿದಿದೆ.

112 ವರ್ಷಗಳ ಹಿಂದೆ ಕೊಟ್ಟ ಸರ್ ಎಂವಿ ಎಚ್ಚರಿಕೆ : ಮರೆತಿದ್ದಕ್ಕೆ ಈಗ ಮುಳುಗಿದ ಮುತ್ತಿನ ನಗರಿ

ತೆಲಂಗಾಣದ ಸಿಕಿಂದರಾಬಾದ್‌ನಿಂದ ಮೇಜರ್‌ ಮಾರ್ಟಿನ್‌ ಅರವಿಂದ ನೇತೃತ್ವದ 98 ಯೋಧರ ತಂಡ ಕಲಬುರಗಿ ಅಗಮಿಸಿದೆ. ಪ್ರವಾಹದಲ್ಲಿ ಸಿಲುಕಿದವರನ್ನ ಈ ತಂಡ ರಕ್ಷಣೆ ಮಾಡಲಿದೆ. ಸೇನಾ ತುಕಡಿಯನ್ನ ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ ಅವರು ಬರಮಾಡಿಕೊಂಡಿದ್ದಾರೆ.