
ಬೆಳಗಾವಿ: ಕೋವಿಡ್ ನಿಯಮ ಉಲ್ಲಂಘಿಸಿ ಹೋಮ-ಹವನ, ಶಾಸಕ ಬಿಟ್ಟು ನಾಲ್ವರ ವಿರುದ್ಧ FIR
* ಶಾಸಕ ಅಭಯ್ ಪಾಟೀಲ್ ಬಿಟ್ಟು ನಾಲ್ವರ ವಿರುದ್ಧ ಎಫ್ಐಆರ್
* ಕೋವಿಡ್ ನಿಯಮ ಉಲ್ಲಂಘಿಸಿ ನಡೆಸಲಾಗಿದ್ದ ಹೋಮ-ಹವನ
* ಬೆಳಗಾವಿ ನಗರದ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಬೆಳಗಾವಿ(ಮೇ.30): ಶಾಸಕರಿಂದ ಕೋವಿಡ್ ನಿಯಮ ಉಲ್ಲಂಘಿಸಿ ನಡೆಸಲಾಗಿದ್ದ ಹೋಮ-ಹವನ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಅಭಯ್ ಪಾಟೀಲ್ ಬಿಟ್ಟು ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಮೇ. 24ರಂದು ಬಸವಣಗಲ್ಲಿಯಲ್ಲಿ ಹೋಮ ಮಾಡಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಬೆಳಗಾವಿ ಮಹಾನಗರ ಪಾಲಿಕೆ ಕಿರಿಯ ಆರೋಗ್ಯ ನಿರೀಕ್ಷಕರ ದೂರಿನ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಹಾಪುರದ ಬಸವಣಗಲ್ಲಿಯ ಸುನೀಲ್ ಮುತಗೇಕರ್, ಕಲ್ಲಪ್ಪ ಶಹಾಪುರಕರ್, ಜಯಂತ ಜಾಧವ್, ಗಿರೀಶ್ ದೋಂಗಡಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಕೊರೊನಾ ಕಂಟ್ರೋಲ್‌ಗೆ ಮೌಢ್ಯದ ಮೊರೆ ಹೋದ ಶಾಸಕ, ಬಡಾವಣೆಯಲ್ಲಿ ಹೋಮ, ಜಾತ್ರೆ
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona