ಮೋದಿ ಕಾರ್ಯಕ್ರಮ: ಪ್ರತಿಭಟನೆಗೆ ಬಂದ ರೈತರು ವಶಕ್ಕೆ

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು  ಬಂಧಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೆಲಮಂಗಲ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರ ಸಂಘದಿಂದ ಪ್ರತಿಭಟನೆ ನಡೆಸೋ ಸಾಧ್ಯತೆ ಹಿನ್ನೆಲೆ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.
 

Share this Video
  • FB
  • Linkdin
  • Whatsapp

ತುಮಕೂರು(ಜ.02): ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಕೋಡಿಹಳ್ಳಿ ಚಂದ್ರಶೇಖರ್ ಅವರನ್ನು ನೆಲಮಂಗಲ ಬಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೈತರ ಸಂಘದಿಂದ ಪ್ರತಿಭಟನೆ ನಡೆಸೋ ಸಾಧ್ಯತೆ ಹಿನ್ನೆಲೆ ಮೋದಿ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದ ವೇಳೆ ವಶಕ್ಕೆ ಪಡೆಯಲಾಗಿದೆ.

ಜಿಲ್ಲೆಯ ಹಲವೆಡೆ ರೈತರ ಬಂಧನ ಹಿನ್ನೆಲೆ ಜಿಲ್ಲಾ ರೈತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ನಮ್ಮ ಸಮಸ್ಯೆ ಗೆ ಸ್ಪಂದಿಸಬೇಕಿತ್ತು. ಆದ್ರೆ ಈ ರೀತಿಯಲ್ಲಿ ಬಂಧಿಸುವುದು ತಪ್ಪು ಎಂದಿದ್ದಾರೆ. ಮೋದಿಯವರು ನಮ್ಮ ಸಮಸ್ಯೆ ಆಲಿಸಿದ್ದರೆ ಪರಿಹಾರ ದೊರಕುತ್ತಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪೊಲೀಸರಿಗೆ ಕ್ಯಾರೇ ಅನ್ನದೆ ಒಳಗೆ ಹೋಗ್ಬಿಟ್ರು ಮೋದಿ ನೋಡಲು ಬಂದ ಅಜ್ಜ..!

ರೈತರ ಬಂಧನದ ವೇಳೆ ರೈತ ಮುಖಂಡರಿಗೆ ಗಾಯವಾಗಿದೆ. ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ತುಮಕೂರು ಆನಂದ್ ಹುಲಿಕಟ್ಟೆ ಕೈಗೆ ಗಾಯವಾಗಿದೆ. ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಬಳಿ ನಡೆದಿದ್ದ ಪ್ರತಿಭಟನೆ ನಡೆದಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮ ವಿರೋಧಿಯಾಗಿ ಪ್ರತಿಭಟನೆ ನಡೆಸಲಾಗಿತ್ತು.

‘ಯಾಕ್ರೀ ಸಚಿವರ ಕಾರ್ ಒಳಗೆ ಬಿಟ್ರಿ..?’ SIಗೆ SP ಅನುಪ್ ಶೆಟ್ಟಿ ಕ್ಲಾಸ್

ಜನವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Related Video