ತುಮಕೂರು(ಜ.02): ಪ್ರಧಾನಿ ನರೇಂದ್ರ ಮೋದಿ ತುಮಕೂರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ಸಭೆ ಆರಂಭವಾಗುವ ಮುನ್ನವೇ ಸ್ಥಳಕ್ಕೆ ಆಗಮಿಸಿದ 98ರ ವೃದ್ಧರೊಬ್ಬರು ಪೊಲೀಸರು ತಡೆದರೂ ಕ್ಯಾರೇ ಅನ್ನದೆ ಒಳಗೆ ನುಗ್ಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಆಗಮಿಸುವ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ಸ್ಥಳದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು. ಒಳಗೆ ಪ್ರವೇಶಿಸುವವರನ್ನು ಕಟ್ಟು ನಿಟ್ಟಾಗಿ ತಪಾಸಣೆ ನಂತರವೇ ಒಳಗೆ ಬಿಡಲಾಗುತ್ತಿತ್ತು. ಯಾವುದೇ ಖಾಸಗಿ ವಾಹನಗಳಿಗೂ ಪ್ರವೇಶವಿರಲಿಲ್ಲ. ಆದರೆ 98ರ ವೃದ್ಧರೊಬ್ಬರು ಇದನ್ನೆಲ್ಲ ದಾಟಿ ಒಳಗೆ ಹೋಗಿಯೇ ಬಿಟ್ಟಿದ್ದಾರೆ.

‘ಯಾಕ್ರೀ ಸಚಿವರ ಕಾರ್ ಒಳಗೆ ಬಿಟ್ರಿ..?’ SIಗೆ SP ಅನುಪ್ ಶೆಟ್ಟಿ ಕ್ಲಾಸ್

ಮೋದಿ ಭೇಟಿಗೆ ಬಂದ 98 ಹರೆಯದ ವೃದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿ ಒಳಹೋಗಿದ್ದಾರೆ. 98 ವರ್ಷದ ನಿವೃತ್ತ ಪ್ರಾಂಶುಪಾಲ ಗೇಟಿನ ಬಳಿ ತಲುಪುತ್ತಿದ್ದಂತೆ ಪೊಲೀಸರು ತಡೆದಿದ್ದಾರೆ. ಪೊಲೀಸರೊಂದಿಗೆ ವಾಗ್ವಾದ ನಡೆಸಿದ ಅವರು, ಪೊಲೀಸರ ನಾಖಾಬಂಧಿ ಭೇದಿಸಿ ಒಳಹೋಗಿದ್ದಾರೆ.

ತುಮಕೂರು: ಪ್ರಧಾನಿ ಮೋದಿಗೆ ಭದ್ರತೆ, ಉಳಿದುಕೊಳ್ಳಲು ಸಕಲ ವ್ಯವಸ್ಥೆ