Farmers protest: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ: ಮೈಮೇಲೆ ಸಗಣಿ ಸುರಿದುಕೊಂಡು ಆಕ್ರೋಶ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದು, ಎತ್ತಿನ ಗಾಡಿಗಳ ಮೂಲಕ ಪಾದಯಾತ್ರೆ ಮಾಡುತ್ತಿದ್ದಾರೆ. 
 

First Published Jun 24, 2024, 3:43 PM IST | Last Updated Jun 24, 2024, 3:43 PM IST

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು ಪ್ರತಿಭಟನೆ(Farmers protest) ನಡೆಸುತ್ತಿದ್ದು, ಮೈಮೇಲೆ ಸಗಣಿ ಸುರಿದುಕೊಂಡು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಸೋಮನಹಳ್ಳಿಯಿಂದ ಕನಕಪುರ ರೋಡ್‌ನಿಂದ ಪಾದಯಾತ್ರೆ(Padayatra) ಮೂಲಕ ಕೆಜಿ ರೋಡ್‌ನಲ್ಲಿರುವ ಡಿಸಿ ಕಚೇರಿಗೆ ಅನ್ನದಾತರು ಮುತ್ತಿಗೆ ಹಾಕಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ರೈತರು ಜಮಾಯಿಸಿದ್ದು, ಎತ್ತಿನ ಗಾಡಿಗಳ ಮೂಲಕ ಪಾದಯಾತ್ರೆ ಮಾಡುತ್ತಿದ್ದಾರೆ. ಟ್ರ್ಯಾಕ್ಟರ್, ಆಟೋವನ್ನು ರೈತರು(Farmers) ತಂದಿದ್ದಾರೆ. ಪಾದಯಾತ್ರೆಯನ್ನು ತಡೆಯಲು ರೋಡ್‌ಗೆ ಅಡ್ಡಲಾಗಿ ಬ್ಯಾರಿಕೇಡ್‌ಗಳನ್ನು ಪೋಲಿಸರು ಹಾಕಿದ್ದಾರೆ. ಎರಡು ಕೆಎಸ್ಆರ್‌ಪಿ ತುಕಡಿ ಮತ್ತು ನಾಲ್ಕೈದು ಶಾಲಾ ಕಾಲೇಜುಗಳ ವಾಹನಗಳಲ್ಲಿ ಪೋಲಿಸರು ಬಂಧಿದ್ದಾರೆ. ರೈತರನ್ನು ಸೋಮನಹಳ್ಳಿ ಗೇಟ್ ಬಳಿಯೇ ತಡೆಯಲು ಸಿದ್ದತೆ ಮಾಡಲಾಗಿದೆ. ಅರಣ್ಯ ಇಲಾಖೆ, ಜಿಲ್ಲಾಡಳಿತ, ಹಾಗೂ NHAI ಅಧಿಕಾರಿಗಳು ಬರ್ತಾರೆ ಎಂದು ಪೊಲೀಸರು ಮನವರಿಕೆ ಮಾಡುತ್ತಿದ್ದಾರೆ. ಇದರಿಂದ ತೃಪ್ತರಾಗದ ರೈತರು ನಮ್ಮ ಸಮಸ್ಯೆ ಗಳನ್ನು ಬಗೆಹರಿಸಲು ಅಧಿಕಾರಿಗಳಿಂದ ಸಾಧ್ಯವಿಲ್ಲ. ಸಚಿವರು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದಾರೆ.

ಇದನ್ನೂ ವೀಕ್ಷಿಸಿ:  ಡಿಕೆಶಿ ಚನ್ನಪಟ್ಟಣ ಬೈ ಎಲೆಕ್ಷನ್‌ನಲ್ಲಿ ಸ್ಪರ್ಧಿಸುವ ವಿಚಾರ ನನ್ನ ಮುಂದೆ ಚರ್ಚೆ ಆಗಿಲ್ಲ: ಡಿಕೆ ಸುರೇಶ್‌