IMA ಕೇಸ್‌ನಲ್ಲಿ ಹಣ ಕಳೆದುಕೊಂಡಿದ್ದವರಿಗೆ ಗುಡ್ ನ್ಯೂಸ್: 55 ಸಾವಿರ ಹೂಡಿಕೆದಾರರಿಗೆ 68 ಕೋಟಿ ಹಂಚಿಕೆ..!

ಐಎಂಎ ಮಾಲೀಕನ ಬಳಿ ಲಕ್ಷ ಲಕ್ಷ ಹಣ ಹೂಡಿಕೆ ಮಾಡಿ ಕೈಸುಟ್ಟುಕೊಂಡಿದ್ದವರಿಗೆ ಕೊಂಚ ರಿಲೀಫ್ ಸಿಕ್ಕಿದೆ. ಕೋರ್ಟ್ ಆದೇಶದ ಮೇರೆಗೆ ಕಾಂಪಿಟೆಂಟ್ ಆಥರಿಟಿ ಹಣ ಹೂಡಿಕೆದಾರರಿಗೆ ಹಣ ಹಿಂದಿರುಗಿಸಿದೆ. ಆದ್ರೆ, ಪುಡಿಗಾಸು ನೀಡಿದ ಅಥಾರಿಟಿ ವಿರುದ್ಧ ಹಣ ಕಳೆದುಕೊಂಡುವರ ಆಕ್ರೋಶ ಮಾತ್ರ ಕಡಿಮೆ ಆಗಿಲ್ಲ.
 

Share this Video
  • FB
  • Linkdin
  • Whatsapp

ಐಎಂಎ ಬಹುಕೋಟಿ ವಂಚನೆ ಕೇಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಕಷ್ಟಪಟ್ಟು ಕೂಡಿಟ್ಟ ಹಣವನ್ನು ಐಎಂಎ ಕಂಪನಿಯಲ್ಲಿ(IMA company) ಹೂಡಿಕೆ ಮಾಡಿದ್ದ ಸಾವಿರಾರು ಮಂದಿ ನ್ಯಾಯಕ್ಕಾಗಿ ಹೋರಾಟ ಮಾಡಿದ್ದು ಇತಿಹಾಸ.ಆದ್ರೀಗ ಹಣ ಕಳೆದುಕೊಂಡಿದ್ದ ಕೆಲವರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಐಎಂಎಯಿಂದ ವಶಪಡಿಸಿಕೊಂಡಿದ್ದ ಸ್ವತ್ತನ್ನು ಹರಾಜು ಮಾಡಿ ಆ ಹಣವನ್ನು ಈಗ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ. ಕೋರ್ಟ್ ಆದೇಶದ ಮೇರೆಗೆ ಕಳೆದ ಫೆಬ್ರವರಿಯಲ್ಲಿ ಕಾಂಪಿಟೆಂಟ್ ಅಥಾರಿಟಿ ಇ-ಹರಾಜು ಪ್ರಕ್ರಿಯೆ ನಡೆಸಿತ್ತು. ಮನ್ಸೂರ್ ಅಲಿಖಾನ್(Mansoor Ali Khan) ಒಡೆತನದ ಐಎಂಎ ಜುವೆಲ್ಲರಿಯಲ್ಲಿ ಡೈಮಂಡ್, ಗೋಲ್ಡ್, ಸಿಲ್ವರ್ ಜಪ್ತಿ ಮಾಡಿ ಇ-ಹರಾಜು ಮಾಡಲಾಗಿತ್ತು. ಹರಾಜು ಮಾಡಿದ್ ಸ್ವತ್ತಿನಲ್ಲಿ ಸಂಗ್ರಹವಾಗಿದ್ದ ಒಟ್ಟು 68 ಕೋಟಿ ರೂ. ಹಣವನ್ನು ಈಗ ಸಂತ್ರಸ್ತರಿಗೆ ಹಂಚಿಕೆ ಮಾಡಲಾಗಿದೆ.ಹೆಚ್ಚಿನ ಲಾಭದ ಆಸೆ ತೋರಿಸಿದ್ದ ಐಎಂಎ ಸಂಸ್ಥಾಪಕ ಮನ್ಸೂರ್ ಅತ್ತ ಲಾಭವನ್ನೂ ನೀಡದೇ ಇತ್ತ ಹೂಡಿಕೆ ಹಣವನ್ನೂ(Money) ನೀಡದೇ ಎಲ್ಲರಿಗೂ ಟೋಪಿ ಹಾಕಿದ್ದ. ಲಕ್ಷಾಂತರ ಮಂದಿಗೆ ಸುಮಾರು 4 ಸಾವಿರ ಕೋಟಿ ವಂಚಿಸಿ ವಿದೇಶಕ್ಕೆ ಹಾರಿದ್ದ.. ವಿದೇಶದಿಂದ ಅರೆಸ್ಟ್ ಮಾಡಿ ಕರೆತಂದಿದ್ದ ರಾಜ್ಯ ಪೊಲೀಸರು ಆತನ ಬಳಿ ಇದ್ದ ಆಸ್ತಿಗಳನ್ನ ಜಪ್ತಿ ಮಾಡಿದ್ರು.ಜಪ್ತಿ ಮಾಡಿದ್ದ ಆಸ್ತಿ ಹರಾಜು ಹಾಕಿ ಅದರಿಂದ ಬಂದ ಹಣ ಹಂಚಿದ್ದಾರೆ.. ಪೂರ್ತಿ ಹಣ ಕೈಬಿಟ್ಟುಹೋಯ್ತಲ್ಲ ಎಂದು ಕೊಂಡಿದ್ದ ಹೂಡಿಕೆದಾರರಿಗೆ ಈಗ ಒಂದಿಷ್ಟು ಹಣ ವಾಪಸ್ ಬಂದಿದ್ದು ಖುಷಿ ನೀಡಿದೆ. ಹಾಗಂತ ಹೂಡಿಕೆದಾರರಿಗೆ ಪೂರ್ತಿ ಖುಷಿಯೂ ಇಲ್ಲ,. ಯಾಕಂದ್ರೆ ಕಳೆದುಕೊಂಡ ಹಣದ ಶೇ.4 ರಿಂದ 8 ರಷ್ಟು ಮಾತ್ರ ವಾಪಸ್ ಬಂದಿದೆ. ಉಳಿದ ಹಣ ಯಾವಾಗ ಸಿಗುತ್ತೆ. ಸಿಗುತ್ತೋ ಇಲ್ವೋ ಅನ್ನೋ ಆತಂಕದಲ್ಲಿದ್ದಾರೆ.

ಇದನ್ನೂ ವೀಕ್ಷಿಸಿ:  ರಾಜ್ಯದಲ್ಲಿ ಕೊಲ್ಕತ್ತಾ ಡ್ಲೂಪಿಕೇಟ್ ಡಾಕ್ಟರ್ಸ್ ಹಾವಳಿ..! ಕವರ್ ಸ್ಟೋರಿಯಲ್ಲಿ ನಕಲಿ ವೈದ್ಯರ ಬಣ್ಣಬಯಲು..!

Related Video