ರೈತರ ನೋವನ್ನ ಕೇಳುವ ಕೃಷಿ ಸಚಿವರೇ ಎಲ್ಲಿದ್ದಿರಪ್ಪಾ..! ಗ್ಯಾರಂಟಿ ಕೊಟ್ಟು..ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?
ಬಿತ್ತನೆ ಬೀಜದ ಬೆಲೆ ಈ ಪರಿ ಹೆಚ್ಚು ಮಾಡುವುದು ಎಷ್ಟು ಸರಿ..?
ಗ್ಯಾರಂಟಿ ಕೊಟ್ಟು.. ಸುಲಿಗೆ ಮಾಡ್ತಿದೆಯಾ ರಾಜ್ಯ ಸರ್ಕಾರ..?
ರೈತ ಸಂಪರ್ಕ ಕೇಂದ್ರದಿಂದ ಬರಿಗೈಯಲ್ಲಿ ರೈತರು ವಾಪಸ್ಸು..!
ಕೆಲವೇ ಕೆಲವು ದಿನಗಳ ಹಿಂದಿನ ಮಾತು.. ಎಂಥಾ ಬಿಸ್ಲು ಕಣ್ರಿ. ಕಾಲ ಕೆಳಗಿನ ಭೂಮಿಯೂ ಬಿಸಿಬಿಸಿ ಹಂಚಾಗಿ ಹೋಗಿತ್ತು. ಯಾವಾಗ ಹನಿ ಹನಿ ಮಳೆ ಬಂತೋ ಭೂಮಿಯಷ್ಟೇ ಅಲ್ಲ. ಭೂಮಿಯ ಮೇಲೆ ಇರೋ ಸಕಲ ಜೀವರಾಶಿಗಳಿಗೂ ಜೀವಕ್ಕೆ ಜೀವ ಬಂದಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದೆ. ಕಳೆದ ವರ್ಷ ಬರಗಾಲದಿಂದ(Drought) ತತ್ತರಿಸಿದ್ದ ಜನ, ಈ ಮಳೆಯನ್ನ ನೋಡಿದ್ದೇ ತಡ, ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಅನ್ನದಾತರಂತೂ (Farmers) ದೊಡ್ಡ ಹಬ್ಬವನ್ನೇ ಆಚರಿಸ್ತಿದ್ದಾರೆ. ಇನ್ನೇನು ಮಳೆ ಆಯ್ತು..ಬಿತ್ತನೇ ಮಾಡ್ಬೇಕು ಅನ್ನೊ ಲೆಕ್ಕಾಚಾರವನ್ನೂ ಶುರು ಮಾಡಿದ್ದಾರೆ. ಆಗಲೇ ನೋಡಿ ಸರ್ಕಾರ ಅವರಿಗೆ ಎಂಥಾ ಶಾಕ್ ಕೊಟ್ಟಿದೆ ಅಂತ. ಕಳೆದ ವರ್ಷ ಬರಗಾಲ ಹೇಗಿತ್ತು ಅನ್ನೊದು ಎಲ್ಲರಿಗೂ ಅನುಭವ ಆಗ್ಹೋಗಿದೆ. ಅದರಲ್ಲೂ ರೈತರಿಗೆ ಆ ಬರಗಾಲದ ಸದ್ಯಕ್ಕೆ ಸುಧಾರಿಸಿಕೊಳ್ಳೊದಕ್ಕೂ ಆಗದಂತ ಬರೆ ಹಾಕಿದೆ. ಈ ಬಾರಿಯೂ ಅಂಥ ಕರಾಳ ದಿನಗಳು ಬರದೇ ಇರಲಿ ಅಂತ ಅಂದುಕೊಳ್ಳುತ್ತಿರುವಾಗಲೇ ಸರ್ಕಾರ ರೈತರ ಇದೇ, ಬರದ ಬರೆಯ ಮೇಲೆ ಇನ್ನೊಂದು ಬರೆಯನ್ನ ಹಾಕಿದೆ. ಅದೇ ಬಿತ್ತನೆ ಬೀಜದ(Sowing Seeds) ದರದ ಬೆಲೆ(Price High) ಏರಿಕೆಯ ಕಳೆದ ಬಾರಿ ಮಳೆ ಕೈಕೊಟ್ಟಿತ್ತು. ಈ ಬಾರಿ ಮುಂಗಾರು ಮಳೆ ಚೆನ್ನಾಗಾಗ್ತಿದೆ, ಮುಂದಿನ ದಿನಗಳಲ್ಲೂ ಮಳೆ ಚೆನ್ನಾಗಿ ಆಗುತ್ತೆ. ಈ ಶುಭ ಸುದ್ದಿ ಯಾವಾಗ ಹವಾಮಾನ ಇಲಾಖೆ ಕೊಟ್ಟಿತ್ತೋ, ರೈತರಿಗೆ ಆದ ಸಮಾಧಾನ ಅಷ್ಟಿಷ್ಟಲ್ಲ. ಅವರು ಬೆಳೆಯೋ ಬೆಳೆಗೆ ಮಳೆಯೇ ತಾನೇ ಜೀವಾಳ. ಇನ್ನೇನು ತಡ ಅಂತ ಬಿತ್ತನೆಗೆ ಮುಂದಾದ್ರು.. ಅದಕ್ಕೆ ಈಗ ಬಿತ್ತನೇ ಬೀಜ ಬೇಕು.. ಅದನ್ನ ಕೊಂಡುಕೊಳ್ಳೊದಕ್ಕೆ ಅಂತ ಹೋದ ಅನ್ನದಾತನಿಗೆ ಶಾಕೋ ಶಾಕು.
ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? 12 ರಾಶಿಗಳ ಫಲ ಯಾವ ರೀತಿ ಫಲ ಇದೆ?