Asianet Suvarna News Asianet Suvarna News

ಬಂಟ್ವಾಳದ ತುಂಬೆ ಡ್ಯಾಂಗೆ ರೈತರ ಮುತ್ತಿಗೆ: ಕೃಷಿ ಭೂಮಿ ನೀರು ಪಾಲು.. 9 ಕುಟುಂಬಗಳು ಕಂಗಾಲು

ಡ್ಯಾಮ್‌ಗೆ ಮುತ್ತಿಗೆ ಹಾಕಿ ಬೀಗ ಜಡಿಯಲು ಮುಂದಾದ ರೈತ ಸಂಘ
ಡ್ಯಾಮ್ ಮುಂಭಾಗ ನೂರಾರು ಸಂಖ್ಯೆಯಲ್ಲಿ ಜಮಾಯಿಸಿರೋ ರೈತರು 
ಡ್ಯಾಮ್‌ನಿಂದ ನೀರು ಹೊರ ಬರುವ ರಭಸಕ್ಕೆ ಕೃಷಿ ಭೂಮಿ ನದಿ ಪಾಲು 
 

ಮಂಗಳೂರು: ತುಂಬೆ ವೆಂಟೆಡ್ ಡ್ಯಾಮ್(Thumbe Vented Dam) ನೀರಿನಿಂದ ಕೃಷಿ ಭೂಮಿ ನದಿಪಾಲಾದ ಹಿನ್ನೆಲೆ ಬಂಟ್ವಾಳದ(Bantwala) ತುಂಬೆ ವೆಂಟೆಡ್ ಡ್ಯಾಂಗೆ ರೈತರು(Farmers) ಮುತ್ತಿಗೆ ಹಾಕಿದರು. ರೈತರನ್ನು ಡ್ಯಾಂ ಗೇಟ್ ಬಳಿಯೇ ಪೊಲೀಸರು ತಡೆದಿದ್ದಾರೆ. ಡ್ಯಾಂ ಗೇಟ್ ಬಳಿ ತಡೆದಿದ್ದಕ್ಕೆ ಪೊಲೀಸರ ವಿರುದ್ಧ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಮತ್ತು ಡ್ಯಾಂ ಸಿಬ್ಬಂದಿ ಜೊತೆ ರೈತರು ವಾಗ್ವಾದ ನಡೆಸಿದರು. ಮಂಗಳೂರು ಪಾಲಿಕೆ ಕಮಿಷನರ್ ಹಾಗೂ ಜಿಲ್ಲಾಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ನದಿ ಕೊರೆತದಿಂದ ಕೃಷಿ ಭೂಮಿ ನಾಶವಾಗಿದ್ದು, ಇದಕ್ಕೆ ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ. ಪ್ರತಿಭಟನಕಾರರು ಆಗಮಿಸುವ ಮುನ್ನವೇ ಡ್ಯಾಮ್‌ಗೆ ಮಹಾನಗರ ಪಾಲಿಕೆ ಬೀಗ ಹಾಕಿದೆ. ನದಿ ಕೊರೆತದಿಂದ ಎಕರೆಗಟ್ಟಲೆ ಕೃಷಿ ಭೂಮಿ ನೀರು ಪಾಲಾಗಿದೆ. ವರ್ಷದಿಂದ ವರ್ಷಕ್ಕೆ ನೇತ್ರಾವತಿ ನದಿ ಕೊರೆತ ಉಲ್ಬಣವಾಗಿದ್ದು, ಅಡಿಕೆ, ತೆಂಗು, ಬಾಳೆಗಿಡ, ಕಾಳು ಮೆಣಸು ಮುಂತಾದ ಬೆಳೆಗಳು ನಾಶವಾಗಿವೆ.

ಇದನ್ನೂ ವೀಕ್ಷಿಸಿ:  Sumalata: ಮೈತ್ರಿಗೆ ಸೆಡ್ಡು ಹೊಡೆಯುತ್ತಾರಾ ಸಂಸದೆ ಸುಮಲತಾ ? ಟಿಕೆಟ್‌ ಸಿಗದಿದ್ದರೂ ಮಂಡ್ಯದಿಂದ ಕಣಕ್ಕೆ ?

Video Top Stories